ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಕಡಕರೆ ಟ್ರಸ್ಟ್ (ರಿ)ಬಡಗಮಿಜಾರು ವತಿಯಿಂದ 2ನೇ ವರ್ಷದ ಸಂಭ್ರಮದ ಆಟಿಡೊಂಜಿ ದಿನ


ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಕಡಕರೆ ಟ್ರಸ್ಟ್ (ರಿ)ಬಡಗಮಿಜಾರು  2ನೇ ವರ್ಷದ ಆಟಿಡೊಂಜಿ ದಿನ  ದಿನಾಂಕ 2/08/2026 ಆದಿತ್ಯವಾರದಂದು ಪಿಲ್ಚಂಡಿ ದೈವಸ್ಥಾನ ಮರಕಡಕರೆ ಮಿಜಾರು ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಪುರುಷರು  ಮಹಿಳೆಯರಿಗೆ ಹಳ್ಳಿ ಸೊಗಡಿನ ವಿವಿಧ ಆಟೋಟ ಸ್ಪರ್ಧೆಗಳು  ಹಾಗೂ ಆಟಿಯ ಸಾಂಪ್ರಾದಾಯಿಕ 24 ಬಗೆಯ ವೈವಿಧ್ಯ ಖಾದ್ಯಗಳನ್ನು ತಯಾರಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮರಿಯಡ್ಕ ರಮೇಶ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರು, ನಾರಾಯಣ ಶೆಟ್ಟಿ, ದೈವಸ್ಥಾನದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮರಕಡಕರೆ, ಕೃಷ್ಣ ಶೆಟ್ಟಿ ಮರಕಡಕರೆ,ಉಮೇಶ್ ಶೆಟ್ಟಿ ಹೊಸಮನೆ,ಕಮಿಟಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಗಣೇಶ್ ಕೋಟ್ಯಾನ್ ನೂಯಿ ಈ ಕಾರ್ಯಕ್ರಮವನ್ನು ನಿರೂಪಿಸಿದರು.