ಮೂಡುಬಿದಿರೆ: ಪಡುಮಾರ್ನಾಡುವಿನಲ್ಲಿ ಭಾರೀ ಗಾಳಿ-ಮಳೆಗೆ ಮುರಿದು ಬಿದ್ದ ಮರ


ಮೂಡುಬಿದಿರೆ: ಬೆದ್ರದ ಪಡುಮಾರ್ನಾಡುವಿನಲ್ಲಿ ಇಂದು ಸುರಿದ ಭಾರೀ ಗಾಳಿ ಸಹಿತ ಮಳೆಗೆ ಗ್ರಾಮದ ಶಿವಾಲಯದಲ್ಲಿ ಪಕ್ಕದ ಮನೆಯವರ ಕಂಪೌಂಡ್ ನಿಂದ ಮರವೊಂದು ಮಧ್ಯ ಭಾಗದಿಂದ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ, ಆಪಾಯದಲ್ಲಿರುವ ಮರ ಹಾಗೂ ತೆಂಗಿನ ಮರಗಳನ್ನು ಕಡಿಯಲು ಮೊದಲೇ ತಿಳಿಸಿದ್ದರು ಕೂಡ ನಮ್ಮ ಮಾತಿಗೆ ಕಿವಿಕೊಡಲಿಲ್ಲ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.