ಮೂಡುಬಿದಿರೆ: ಕಲ್ಲಬೆಟ್ಟು ಕರಿಂಜೆಯಲ್ಲಿರುವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದ್ದು, ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ವಿಜೇತ್(೧೭) ಎಂದು ಗುರುತಿಸಲಾಗಿದೆ.
ವಿಜೇತ್ ಮೈಸೂರು ಮೂಲದವನಾಗಿದ್ದು ಸಂಜೆಯ ವೇಳೆ ತಂದೆಗೆ ಕರೆಮಾಡಿದ್ದು ಆ ಬಳಿಕ ತಂದೆ ಬುದ್ದಿ ಮಾತು ಹೇಳಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.