ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ತಲ್ವಾರ್ ದಾಳಿ; ಭೀಕರ ಹತ್ಯೆ, ಆರೋಪಿ ಪರಾರಿ


ಬಂಟ್ಬಾಳ: ತಾಲೂಕಿನ ಮುಖ್ಯ ನಗರವಾದ ಬಿ.ಸಿ ರೋಡಿನಲ್ಲಿ ಭೀಕರ ದಾಳಿಯೊಂದು ನಡೆದ ಬಗ್ಗೆ ವರದಿಯಾಗಿದ್ದು, ಬಿ.ಸಿ ರೋಡಿನ ಬಸ್ ನಿಲ್ದಾಣದಲ್ಲಿ ಬಸ್ಸಿಗೆಂದು ಕಾದು ಕುಳಿತಿದ್ದ ಯುವತಿಯ ಮೇಲೆ ಯುವಕನೋರ್ವ ಭೀಕರ ತಲ್ವಾರ್ ದಾಳಿ ನಡೆಸಿದ್ದು, ಯುವತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ.

ರಕ್ತದಾನ ಮಡುವಿನಲ್ಲಿ ಯುವತಿ ಬಿದ್ದಿರುವುದರನ್ನು ನೋಡಿದಾಗಲೇ ದಾಳಿಯ ಭೀಕರತೆಯನ್ನು ವಿವರಿಸುವಂತಿದೆ. ದಾಳಿ ಮಾಡಿರುವ ವ್ಯಕಿ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಕೊಲೆಯಾದ ಯುವತಿಯ ವಯಸ್ಸು ಸುಮಾರು ೨೫ ಎಂದು ಅಂದಾಜಿಸಲಾಗಿದೆ.