ಕಂಬಳ ಕ್ಷೇತ್ರದ ಹೆಮ್ಮೆಯ ಧ್ವನಿ; ಕಾಂಗ್ರೆಸ್ ಮುಖಂಡ ನಿರಂಜನ್ ರೈ ಮಠಂತಬೆಟ್ಟು ವಿಧಿವಶ.!


ಪುತ್ತೂರು: ಕಂಬಳ ಕ್ಷೇತ್ರದ ಹೆಮ್ಮೆಯ ಧ್ವನಿ ಹಾಗೂ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಕೊಡಿಂಬಾಡಿ ಮಹಿಷಮರ್ಧಿಸಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕೆಲಸ ನಿಮಿತ್ತ ತಾಲೂಕು ಕಚೇರಿಗೆ ಆಗಮಿಸಿದ ಸಂಧರ್ಭದಲ್ಲಿ ಏಕಾಏಕಿ ಕುಸಿದು ಬಿದ್ದರು ಆ ಬಳಿಕ ಅವರನ್ನು ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಂಬಳ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ರೈ ಅವರು ಪತ್ನಿ, ಇಬ್ಬರೂ ಪುತ್ರರೂ ಹಾಗೂ ಆನೇಕ ಬಂಧು-ಮಿತ್ರರನ್ನು ಆಗಲಿದ್ದಾರೆ. ಕಂಬಳ ಸಮಿತಿಯ ಆನೇಕರು ನಿರಂಜನ್ ರೈ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.