ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್(ರಿ.) ರಾಷ್ಟ್ರೀಯ ಮಟ್ಟದ 11 ವರ್ಷದೊಳಗಿನ ಬಾಲಕಿಯರ ಮುಕ್ತ ಚೆಸ್ Championship


ಮಂಗಳೂರು: ಕನ್ನಡ ಚೆಸ್ ಅಸೋಸಿಯೇಷನ್ (ರಿ.), ಮಂಗಳೂರು ವತಿಯಿಂದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್ಶಿಪ್–2026 ಅನ್ನು 2026ರ ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಪ್ರತಿಷ್ಠಿತ ರಾಷ್ಟ್ರೀಯ ಚಾಂಪಿಯನ್ಶಿಪ್‌ನಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 600 ಕ್ಕೂ ಅಧಿಕ ಆಟಗಾರರು, ತರಬೇತುದಾರರು ಹಾಗೂ ಪೋಷಕರು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕಕ್ಕೆ ಹಾಗೂ ವಿಶೇಷವಾಗಿ ಕರಾವಳಿ ಭಾಗಕ್ಕೆ ಈ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಆಯೋಜಿಸುವುದು ಹೆಮ್ಮೆಯ ಸಂಗತಿಯಾಗಿದೆ. 

ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ಆದೇಶದಂತೆ,ಅಖಿಲ ಭಾರತ ಚೆಸ್ ಪೆಡೆರೇಶನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ನು ಆಯ್ಕೆ ಮಾಡಿ ಅದರಂತೆ ದ. ಕ ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ) ಮಂಗಳೂರು ಇದರ ಆಯೋಜನೆಗೆ ಮುಂದಾಗಿದ್ದು, ಇದು ಕರ್ನಾಟಕ ರಾಜ್ಯ ಕ್ಕೆ ಹಾಗೂ ನಮ್ಮ ಕರಾವಳಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.




ದ. ಕ ಜಿಲ್ಲೆಯನ್ನು ಚೆಸ್ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಈ ಚಾಂಪಿಯನ್ಶಿಪ್ ಮಾಡುತ್ತಿದೆ. ಈ ಪ್ರತಿಷ್ಠಿತ ಚಾಂಪಿಯನ್ಶಿಪ್ ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಶ್ರೀ. ಯು. ಟಿ. ಖಾದರ್ ಹಾಗೂ ಮಂಗಳೂರು ಲೋಕಸಭಾ ಸದಸ್ಯ ಶ್ರೀ. ಕ್ಯಾಪ್ಟನ್ ಬ್ರಿಜೇಶ್ ಚೌಟ  ನೇತ್ರತ್ವದಲ್ಲಿ ಭರದಿಂದ ಸಿದ್ಧತೆಗಳು ಆಗುತ್ತಿದೆ ಎಂದು , ದ. ಕ. ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಹಾಗೂ ಸಂಘಟಕರು ಹರ್ಷ ವ್ಯಕ್ತಪಡಿಸಿದರು.