ಬಂಟ್ವಾಳ: ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಗೆ ಚೂರಿ ಇರಿದು ಯುವಕ ಪರಾರಿ


ಬಂಟ್ವಾಳ: ತಾಲೂಕಿನ ಮೊಂತಿಮಾರು ಪಡ್ಪು ಎಂಬಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಬಸ್'ಗಾಗಿ ಕಾದು ಕುಳಿತಿದ್ದ ಯುವತಿಗೆ ಸ್ಥಳೀಯ ನಿವಾಸಿಯೊಬ್ಬ ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಆರೋಪಿಯನ್ನು ಮೊಂತಿಮಾರು ಸ್ಥಳೀಯ ನಿವಾಸಿ ಜವ್ವಾರ್(೨೮) ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಆರೋಪಿಯು ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಯುವತಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇತರ ಸ್ಥಳೀಯರು ಜೋರಾಗಿ ಕಿರುಚಿದ ಪರಿಣಾಮವಾಗಿ ಆರೋಪಿಯೂ ಚೂರಿ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಂಟ್ಬಾಳ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.