ಪ್ರಸಾದ್ ನೇತ್ರಾಲಯ ಉಡುಪಿ ಹಾಗೂ ಇತರ ಸಂಸ್ಥೆಗಳ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ


ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣ ವಿಭಾಗ ಮಂಗಳೂರು, ದಕ್ಷಿಣ ಕನ್ನಡ, ಲಯನ್ಸ್ ಕ್ಲಬ್ ಮೂಡಬಿದ್ರೆ, ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ, ಹಾಗೂ ನಮ್ಮ ಕ್ಲಿನಿಕ್ ಗಂಟಲ್ಕಟ್ಟೆ  ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವು ನಮ್ಮ ಕ್ಲಿನಿಕ್ ಗಂಟಲ್ಕಟ್ಟೆ ಯಲ್ಲಿ ದಿನಾಂಕ 9-06-2026ರಂದು ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಂಡಿತು.

ಈ ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾಕ್ಟರ್ ಮಾನಸರವರು ಜನರಿಗೆ ಕಣ್ಣಿನ ಶಿಬಿರದ ಬಗ್ಗೆ ಮಾಹಿತಿ ನೀಡಿದರು.. ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ ಇಲ್ಲಿಯ ಆಡಳಿತ ವೈದ್ಯಧಿಕಾರಿಯವರಾದ ಡಾಕ್ಟರ್ ಅಕ್ಷತಾ ನಾಯಕ್, ಬಾಹುಬಲಿ ಪ್ರಸಾದ್, ಸುರೇಶ್ ಕೋಟ್ಯಾನ್, ಕೃಷ್ಣರಾಜ ಹೆಗ್ಡೆ, ಪದ್ಮಯ ಬಿ ಸುವರ್ಣ, ಶ್ರೀಧರ್, ಶಾರದಾದೇವಿ, ನಿಶಾ, ಶ್ರೀ ಕೆ ಶ್ರೀಪತಿ ಭಟ್, ಸುಂದರ ಹಾಗೂ ನಮ್ಮ ಕ್ಲಿನಿಕ್ ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಮಾರು 105ಕ್ಕೂ ಅಧಿಕ ಜನ ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಇದರ ಜೊತೆಗೆ ಶಿಬಿರದಲ್ಲಿ ಪಾಲ್ಗೋಂಡ ಇತರರಿಗೂ ಕಣ್ಣಿನ ಆರೋಗ್ಯದ ಬಗೆಗಿನ ವಿಶೇಷ ಮಾಹಿತಿಯನ್ನು ನೀಡಲಾಯಿತು.