ಮೂಡುಬಿದಿರೆ: ಬೆದ್ರದ ಅಪಘಾತ ವಲಯ ಎಂದೇ ಕುಖ್ಯಾತಿ ಪಡೆದಿದ್ದ ಬನ್ನಡ್ಕಕ್ಕೆ ಕೊನೆಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ಕೊಟ್ಟಿದ್ದಾರೆ. ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಇತ್ತೀಚಿಗೆ ಕದಂಬ ಮೀಡಿಯಾ ಈ ಬಗ್ಗೆ ವಿಸ್ತೃತವಾದ ವರದಿಯನ್ನು ಭಿತ್ತರಿಸುವುದರ ಜೊತೆಗೆ ಸಂಸದರನ್ನು ಪ್ರಶ್ನಿಸುವ ಕೆಲಸ ಮಾಡಿತ್ತು. ಬನ್ನಡ್ಕಕ್ಕೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಜವಾಬ್ದಾರಿ ನನ್ನದು ಹಾಗೂ ಸ್ಥಳಕ್ಕೆ ಶೀಘ್ರದಲ್ಲಿ ಭೇಟಿ ನೀಡುತ್ತೇನೆ ಎಂದಿದ್ದರು.
