ಪುತ್ತೂರು: ಬೊಳುವಾರು ಕ್ಷೇತ್ರದಲ್ಲಿ `ವೀರಮಣಿ ಕಾಳಗ' ತಿಂಗಳ ಯಕ್ಷಗಾನ ತಾಳಮದ್ದಳೆ


ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನದ (ರಿ ) ವತಿಯಿಂದ ಏಪ್ರಿಲ್ ತಿಂಗಳ ತಾಳಮದ್ದಳೆ "ವೀರಮಣಿ ಕಾಳಗ " ಯಕ್ಷಗಾನ ಪ್ರಸಂಗವು ಎ. 5ರಂದು ಅಪರಾಹ್ನ 2:30 ರಿಂದ ಸಂಜೆ 6:30ರ ವರೆಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ರಾಜಗೋಪಾಲ ಜೋಶಿ ಹಾಗೂ ಚೆಂಡೆ ಮತ್ತು ಮದ್ದಳೆಯಲ್ಲಿ   ಪ್ರಚೇತ್ ಆಳ್ವ, ಶ್ರೀಪತಿ ಭಟ್, ಧನುಷ್, ಜ್ಯೋತಿರಾದಿತ್ಯ, ಸಂಹಿತಾ, ಸುಧನ್ವ,  ಅನೀಶ್, ಶ್ರೀಯಾ, ಜ್ಞಾನಿತ್ ಮತ್ತು  ಪ್ರತಿಷ್ಠಾನದ ಇತರ ವಿದ್ಯಾರ್ಥಿಗಳು ಸಹಕರಿಸಿದರು.

ಅರ್ಥಧಾರಿಗಳಾಗಿ ಶ್ರೀಯುತರಾದ  ಗುಡ್ಡಪ್ಪ ಬಲ್ಯ, ಭಾಸ್ಕರ ಶೆಟ್ಟಿ, ಶಂಕರ್ ಸಾರಡ್ಕ, ಪ್ರಸನ್ನ ಕುಮಾರ್ ಬಳ್ಳಾಲ್, ಪ್ರಚೇತ್ ಆಳ್ವ,  ಪಾಲ್ಗೊಂಡರು.  ಸಂಘದ ಕಾರ್ಯದರ್ಶಿ ಶಂಕರ ಭಟ್ ಸ್ವಾಗತಿಸಿದರು. ರಾಮ ಕೆ ಕಾರ್ಯಕ್ರಮ ನಿರೂಪಿಸಿದರು.  ಪ್ರತಿಷ್ಠಾನದ ವಿದ್ಯಾರ್ಥಿ ಜ್ಞಾನಿತ್ ನ ಹುಟ್ಟುಹಬ್ಬದ ಪ್ರಯುಕ್ತ ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ವಹಿಸಿದ ನವೀನ್ ರೈ ಯವರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ಶಂಕರ ಸಾರಡ್ಕ ರವರು ಶಾಲು ಹಾಕಿ ಅಭಿನಂದಿಸಿದರು. 

ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಪ್ರಾಯೋಜಕರಿಗೆ ದೇವಸ್ಥಾನದ ವತಿಯಿಂದ ಪ್ರಸಾದವನ್ನು ನೀಡಿ ಶುಭ ಹಾರೈಸಿದರು. ಸಂಘದ ಸದಸ್ಯರಾದ ವಸಂತ ನಾಯಕ್ ಅಜೇರು, ಬಾಲಸುಬ್ರಹ್ಮಣ್ಯ ಶರ್ಮ, ಅನಂತ ನಾರಾಯಣ ಮೊದಲಾದವರು ಸಹಕರಿಸಿದರು.