ಗರಡಿ ಫ್ರೆಂಡ್ಸ್ ಮಿಜಾರ್ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ದೈವ ನರ್ತಕ ಉಮೇಶ್ ಪಂಬದರಿಗೆ ಸನ್ಮಾನ


ಮಿಜಾರ್: ಗರಡಿ ಫ್ರೆಂಡ್ಸ್ ಮಿಜಾರ್ ಆಶ್ರಯದಲ್ಲಿ ನಡೆದ ಮೊದಲ ವರ್ಷದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಮಿಜಾರ್ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಉಮೇಶ್ ಪಂಬದರನ್ನು ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಕಾಶ್ ಆಳ್ವ ಹಾಗೂ ಹರಿಪ್ರಸಾದ್ ಶೆಟ್ಟಿ ಮಿಜಾರ ಗುತ್ತು ಮತ್ತಿತರರು ಉಪಸ್ಥಿತರಿದ್ದರು.