ಮೂಡುಬಿದಿರೆ: ಸನಾತನ ಧರ್ಮದ ಸಮಾಗಮಕ್ಕಾಗಿ ಜವನೆರ್ ಬೆದ್ರ ಫೌಂಡೇಶನ್(ರಿ.)ನಿಂದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ವೈಭವದಿಂದ ಜರುಗಿದ ಶ್ರೀ ರಾಮ ನಾಮ ನಗರ ಭಜನಾ ಸಂಕೀರ್ತನೆ


ಮೂಡುಬಿದಿರೆ: ಹಿಂದೂ ಸಮಾಜವನ್ನು ಜಾತಿ ತಾರತಮ್ಯವಿಲ್ಲದೆ ಎಲ್ಲಾರನ್ನೂ ಒಟ್ಟುಗೂಡಿಸುವ ನಿಟ್ಟಿನಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ವತಿಯಿಂದ ಶ್ರೀ ರಾಮ ನಾಮ ನಗರ ಭಜನಾ ಸಂಕೀರ್ತನೆ ಕಾರ್ಯಕ್ರಮವೂ ವೈಭವದಿಂದ ಜರುಗಿತು. ಮೂಡುಬಿದಿರೆ ನಗರದ ಉದ್ದಕ್ಕೂ ಆನೇಕ ಭಜನಾ ತಂಡಗಳು ಹೆಜ್ಜೆ ಹಾಕುತ್ತಾ ಪಲ್ಲಕಿಯೊಂದಿಗೆ ಸಾಗಿದರು.


ಕಳೆದ ಎರಡು ವರ್ಷಗಳಿಂದ ಶ್ರೀ ರಾಮ ನಾಮ ಭಜನಾ ಸಂಕೀರ್ತನೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಭಾರೀ ವೈಭವದಿಂದ ಕಾರ್ಯಕ್ರಮ ನೆರವೇರಿತು. ಉದ್ಯಮಿಗಳಾದ ಶ್ರೀಪತಿ ಭಟ್, ಮೂಡುಬಿದಿರೆಯ ವೆಂಕಟರಮಣ ದೇವಸ್ಥಾನ ಹಾಗೂ ಹನುಮಾನ್ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಶ್ರೀ ಜಿ ಉಮೇಶ್ ಪೈ, ವಕೀಲರಾದ ಚೇತನ್ ಶೆಟ್ಟಿ, ಆಶ್ವಥ್ ಪಣಪಿಲ, ಸಮಿತ ಸಂದೀಪ್, ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಗುರುಪ್ರಸಾದ್ ಹೊಳ್ಳ, ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕರಾದ ಅಮರ್ ಕೋಟೆ ಹಾಗೂ ಸಮಿತಿಯ ಟ್ರಸ್ಟಿಗಳು, ಸಂಚಾಲಕರು, ಅಬ್ಬಕ್ಕ ಬ್ರಿಗೇಡ್, ಭಕುತಿ ಸಂಘ, ರಕ್ತ ನಿಧಿ ಹಾಗೂ ಯುವಸಂಘಟನೆಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.