ಮಂಗಳೂರಿನಲ್ಲಿ ಭೀಕರ ಅಪಘಾತ; ಹಸೆಮಣೆ ಏರಬೇಕಿದ್ದ ಯುವತಿ ಸ್ಥಳದಲ್ಲೇ ಸಾ'ವು


ಮಂಗಳೂರು: ನಗರದ ನಂತೂರು ಬಳಿ ಭೀಕರ ಅಪಘಾತವೊಂದು ನಡೆದಿದ್ದು, ನಿಶ್ಚಿತಾರ್ಥವಾಗಿ ಹಸೆಮಣೆ ಏರಬೇಕಿದ್ದ ಯುವತಿ ಸ್ಥಳದಲ್ಲೇ ಸಾವನ್ನಾಪ್ಪಿರುವ ಘಟನೆ ನಡೆದಿದೆ. ತನ್ನ ಭಾವಿ ಪತಿಯೊಂದಿಗೆ ಮೋಟಾರ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಖಾಸಗೀ ಬಸ್ ಒಂದು ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಖಾಸಗೀ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಸ್ಥಳೀಯರು ಖಾಸಗೀ ಬಸ್ ಗಳು ಅನಿಯಂತ್ರಿತ ಚಾಲನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಯುವತಿಯನ್ನು ದೀಪ್ತಿ ಎಂದು ಗುರುತಿಸಲಾಗಿದೆ. ಸರ್ಕಾರ ಖಾಸಗೀ ಬಸ್ ಗಳಿಗೆ ಸ್ಪೀಡ್ ಬ್ರೇಕರ್ ಆಳವಡಿಸಬೇಕು ಎಂದು ಸ್ಥಳೀಯರು ಪೋಲಿಸರ ಮೂಲಕ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ್ದಾರೆ.