ಕಲ್ಲಬೆಟ್ಟು ಶ್ರೀ ಮಹಾಮಾಯ ದೇವಸ್ಥಾನದಲ್ಲಿ ವೈಭವದ ಮಹಾಶಿವರಾತ್ರಿ ಆಚರಣೆ


ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಶ್ರೀ ಮಹಾಮಾಯ ದೇವಸ್ಥಾನದಲ್ಲಿ ರಾಮಕ್ಷತ್ರಿಯ ಸೇವಾ ಸಂಘ ಮತ್ತು ಅದರ ಉಪ ಸಮಿತಿಗಳಾದ ಮಹಿಳಾ ಸಮಿತಿ, ಯುವ ವೃಂದ ಹಾಗೂ ಭಜನಾ ಮಂಡಳಿ ವತಿಯಿಂದ ಶ್ರೀ ಮಹಾಮಾಯಿ, ಶ್ರೀ ಕಾಲಭೈರವೇಶ್ವರ  ಹಾಗೂ ಸಹ ಪರಿವಾರ ದೇವರಿಗೆ ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು ಜೊತೆಗೆ ದೇವರಿಗೆ ಭಜನೆ ಸಂಕೀರ್ತನೆಯೂ ನಡೆಯಿತು.



ಮಹಾಶಿವರಾತ್ರಿಯ ಈ ವಿಶೇಷ ಪೂಜಾ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರು , ಸರ್ವ ಸದಸ್ಯರು, ಹಾಗೂ ಆಡಳಿತ ಮಂಡಳಿಯ ಟ್ರಸ್ಟಿಗಳು ಉಪಸ್ಥಿತರಿದ್ದರು