ನೀರು ಪಾಲಾದ ಒಂದೇ ಕುಟುಂಬದ ನಾಲ್ವರು; ಶವ ಹುಡುಕಿ ಕೊಟ್ಟ ಈಶ್ವರ್ ಮಲ್ಪೆ.!


ಶಿವಮೊಗ್ಗ: ಜಿಲ್ಲೆಯ ಭದ್ರವಾತಿ ಅರಬಿಳಚಿ ಕ್ಯಾಂಪ್ ನಲ್ಲಿ ನೀರು ಪಾಲಾಗಿದ್ದ ಒಂದೇ ಕುಟುಂಬ ನಾಲ್ವರ ಮೃತದೇಹಗಳ ಪತ್ತೆಗಾಗಿ ನಾಲ್ಕನೇ ದಿನದ ಶೋಧ ಕಾರ್ಯ ಆರಂಭವಾಯಿತು. ನಾಲೆಯಲ್ಲಿ ನೀರಿನ ಹರಿವು ರಭಸವಾಗಿದ್ದರಿಂದ ಕಾರ್ಯಚರಣೆಗೆ ಆಡ್ಡಿಯಾಗಿತ್ತು. ಅದರೂ ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಒಂದು ಮಾತು ಕೊಟ್ಟಿದ್ದರು; ಕೊಟ್ಟ ಮಾತಿನಂತೆ ನಾಲ್ವರ ಮೃತದೇಹವನ್ನು ಹೊರತೆಗೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಈಶ್ವರ್ ಮಲ್ಪೆ ಮೃತದೇಹ ಶೋಧ ಕಾರ್ಯಾಚರಣೆ ನಡೆಸಿದ್ದರು. ಅದರೂ ಮೃತ ದೇಹಗಳು ಪತ್ತೆಯಾಗಲಿಲ್ಲ ನಾಲ್ಕನೇ ದಿನದ ಶೋಧ ಕಾರ್ಯ ಆರಂಭಿಸಿದ ಈಶ್ವರ್ ಮಲ್ಪೆ ತಂಡದವರೂ ಕೊನೆಗೂ ನಾಲ್ಕು ಮೃತದೇಹಗಳನ್ನು ನಾಲೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನದಲ್ಲಿ ತಾಯಿ ನೀಲಾಬಾಯಿ ಮತ್ತು ರವಿ ಶವ ಪತ್ತೆ ಆಗಿತ್ತು. ಇಂದು ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ ಮೃತದೇಹಗಳು ಪತ್ತೆ ಆಗಿವೆ..

ಕೊಟ್ಟ ಮಾತು ಉಳಿಸಿಕೊಂಡ ಈಶ್ವರ್ ಮಲ್ಪೆ:

ಈಶ್ವರ್ ಮಲ್ಪೆ ಕಾರ್ಯಚರಣೆಗೆ ಬಂದ ಮೊದಲ ದಿನವೇ ಒಂದು ಮಾತು ಹೇಳಿದ್ದರು. ನಾಲ್ಕು ದೇಹಗಳನ್ನು ಪತ್ತೇ ಹಚ್ಚಿ ನಾನು ಇಲ್ಲಿಂದ ಹೋಗುವುದು ಎಂದು ಮಾತು ಕೊಟ್ಟಿದ್ದರು. ಆ ಪ್ರಕಾರ ನಾಲ್ಕು ಮೃತದೇಹಗಳನ್ನು ಹೊರತೆಗೆಯುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.