ಬೆಳ್ತಂಗಡಿ ತಾಲೂಕಿನ ಒಡಿಳ್ನಾಲ ಗ್ರಾಮದ ಸುಮಂತ್ ಎಂಬ ಬಾಲಕನ ಅಸಹಜ ಸಾವು ಪ್ರಕರಣ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಬಾಲಕನ ಮೃತ ದೇಹದ ಶವ ಪರೀಕ್ಷೆಯ ವರದಿ ಪೋಲಿಸರ ಕೈ ಸೇರಿದ್ದು ಈ ಸಾವಿನಲ್ಲಿ ಹಲವಾರು ಅನುಮಾನಾಸ್ಪದ ಅಂಶಗಳಿಂದ ಇದನ್ನು ಕೊ* ಪ್ರಕರಣವಾಗಿ ಪರಿವರ್ತಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
