30 ಅಡಿ ಆಳದ ಬಾವಿಗೆ ಬಿದ್ದ ಮೂಡುಬಿದಿರೆಯ ವ್ಯಕ್ತಿ.?


ಮೂಡುಬಿದಿರೆ: ಬೆದ್ರದ ಪುತ್ತಿಗೆ ಗ್ರಾಮದ ಬಂಗ್ಲೆ ಎಂಬ ಪ್ರದೇಶದಲ್ಲಿ ಕಳೆದ ರಾತ್ರಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸುರಂಗದೊಳಗೆ ಸಿಲುಕಿಕೊಂಡಿದ್ದರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿಗಳು ವ್ಯಕ್ತಿಯನ್ನು ಸಾಹಸಮಯ ರೀತಿಯಲ್ಲಿ ರಕ್ಷಿಸಿದ್ದಾರೆ. ಪುತ್ತಿಗೆಯ ಜಾಣಪ್ಪ ಗೌಡರ ಪುತ್ರ ರಾಧಕೃಷ್ಣ(38 ವರ್ಷ) ಎಂಬುವವರು 30 ಅಡಿ ಆಳದ ಬಾವಿಗೆ ಬಿದ್ದು ೨೦ ಅಡಿ ಆಳದ ಸುರಂಗದೊಳಗೆ ಬಿದ್ದು ಒದ್ದಾಡುತ್ತಿದ್ದರು. 

ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ಬಂದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳಾದ  ಜಯ ಮೂಲ್ಯ ಹಾಗೂ ರೂಪೇಶ್ ಅವರು ಬಾವಿಯೊಳಗೆ ಇಳಿದಿದ್ದರು. ಇವರಿಗೆ ಸಹೋದ್ಯೋಗಿಗಳಾದ ನಿತ್ಯಾನಂದ ಮತ್ತು ಬಸವರಾಜ ಅವರು ಸಾಥ್ ನೀಡಿದರು. ಬಾವಿಯ ಕತ್ತಲೆ ಮತ್ತು ಸುರಂಗದ ಸಂಕೀರ್ಣತೆಯ ನಡುವೆಯೂ ಅಗ್ನಿಶಾಮಕ ದಳದವರು ಯಶಸ್ವಿಯಾಗಿ ರಾಧಾಕೃಷ್ಣ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.