ಅಸ್ಪತ್ರೆಯಿಂದ ಮರಳುತ್ತಿರುವಾಗ ಪುತ್ತಿಗೆ ಪಟ್ಲದಲ್ಲಿ ರಿಕ್ಷಾ ಪಲ್ಟಿ.! ಕಡಂದಲೆಯ ಆಶಾ ಕಾರ್ಯಕರ್ತೆಗೆ ಗಾಯ

ಮೂಡುಬಿದ್ರೆ: ರೋಗಿಯೊಬ್ಬರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳಿ ಕರೆದುಕೊಂಡು ಬರುವಾಗ ಪ್ರಯಾಣಿಸುತ್ತಿದ್ದ ಆಟೋ ಪಲ್ಟಿಯಾಗಿ ಆಶಾ ಕಾರ್ಯಕರ್ತರೊಬ್ಬರು ಗಾಯಗೊಂಡ ಘಟನೆ ಪುತ್ತಿಗೆ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಲದಲ್ಲಿ ನಡೆದಿದೆ. 


ಮೂಡುಬಿದ್ರೆಯ ಕಡಂದಲೆ ನಿವಾಸಿ ಪವಿತ್ರಾ ನಾಯ್ಕ್ ಎಂಬುವವರು ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವವರು ಸ್ಥಳೀಯ ನಿವಾಸಿಯೊಬ್ಬರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳಿ  ಬರುತ್ತಿರುವ ಸಂಧರ್ಭದಲ್ಲಿ ತಾವುಗಳು ಪ್ರಯಾಣಿಸುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದ್ದು, ಆಶಾ ಕಾರ್ಯಕರ್ತೆ ಪವಿತ್ರಾ ನಾಯ್ಕ್ ಅವರಿಗೆ ಗಾಯಗಳಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


Post a Comment

0 Comments