ಮೂಡುಬಿದ್ರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ನೇತೃತ್ವದಲ್ಲಿ ವೀರ ರಾಣಿ ಅಬ್ಬಕ್ಕಳ ಐನ್ನೂರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ 500 ಜನ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ನೀಡಲು ನಿರ್ಧಾರಿಸಿದ್ದು ಇದರ ಮೊದಲ ಹಂತವಾಗಿ ಐವತ್ತು ಜನರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ವಿತರಿಸುವ ಕಾರ್ಯಕ್ರಮ ಇಂದು ಅಬ್ಬಕ್ಕ ಕಿರು ಉದ್ಯಾನವನದಲ್ಲಿ ನಡೆಯಿತು.
ಚೌಟ ಅರಮನೆಯ ಮುಖ್ಯಸ್ಥರಾದ ಕುಲದೀಪ್ ಎಂ ಅಬ್ಬಕ್ಕ ಪ್ರೇರಣಾ ಪತ್ರವನ್ನು ಸಾಧಕಿಯರಿಗೆ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸ್ಥಾಪಕಧ್ಯಕ್ಷರಾದ ಅಮರ್ ಕೋಟೆ, ಕಾರ್ಯದರ್ಶಿಗಳಾದ ದಿನೇಶ್ ನಾಯ್ಕ್, ಯುವ ಸಂಘಟನೆಯ ಸಂಚಾಲಕರಾದ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕರಾದ ಸಹನಾ ನಾಯಕ್, ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರದ ಸಂಯೋಜಕರಾದ ಸುನಿತಾ ಉದಯ ಶೆಟ್ಟಿ, ಹಾಗೂ ಅಕ್ಷಯ್, ಮನು, ಪ್ರತೀಶ್, ರಿಯಾ, ಸುಕನ್ಯಾ, ಅಮಿತಾ, ಸಮಿತ್ ರಾವ್, ರಾಧಿಕಾ ರಾವ್ ಹಾಗೂ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಕೆಲ್ಲಪುತ್ತಿಗೆ ಮಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಸಮಾಜದಲ್ಲಿರುವ ಸ್ತ್ರೀ ಸಮಾಜಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ಈ ಅಬ್ಬಕ್ಕ ಪ್ರೇರಣಾ ಪತ್ರವನ್ನು ನೀಡಲಾಗಿದ್ದು ಮುಂದಿನ ಹಂತಗಳಲ್ಲಿ ಇನ್ನೂ ಆನೇಕ ಸಾಧಕಿಯರಿಗೆ ಈ ಪ್ರೇರಣಾ ಪತ್ರವನ್ನು ನೀಡಲು ನಿರ್ಧರಿಸಲಾಗಿದೆ.
0 Comments