ಮೂಡುಬಿದ್ರೆ: ಬೆದ್ರದ ಪ್ರತಿಷ್ಠಿತ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಮೇಲೆ ಇಬ್ಬರು ಬಂದು ಏಕಾಏಕಿ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಇಂದು ಸಂಜೆ ೪.೩೦ರ ಸುಮಾರಿಗೆ ಈ ಹಲ್ಲೆ ನಡೆದಿದ್ದು ಎಂದು ತಿಳಿದು ಬಂದಿದ್ದು. ಪೆಟ್ರೋಲ್ ಬಂಕ್ ಸಿಬ್ಬಂದಿಗಳಾದ ಮೌನೇಶ್, ಸುರೇಶ್ ಹಾಗೂ ಪ್ರವೀಣ್ ಎಂಬುವವರ ಮೇಲೆ ತೀರ್ವವಾದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೆಟ್ರೋಲ್ ಬಂಕ್ ನಲ್ಲಿ ಈ ರೀತಿ ಘಟನೆ ನಡೆದ ಕಾರಣ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಲ್ಲೆಗೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೇ ಪೆಟ್ರೋಲ್ ಬಂಕ್'ನ ಹಳೆಯ ಸಿಬ್ಬಂದಿಯೊರ್ವ ಈ ಹಲ್ಲೆಯ ಹಿಂದಿರುವ ವ್ಯಕ್ತಿ ಎಂದು ಶಂಕಿಸಲಾಗಿದೆ.
0 Comments