ತುಳುನಾಡ ಕುವರಿ, ಕಬ್ಬಡ್ಡಿ ವಿಶ್ವಕಪ್ ವಿಜೇತೆ ಧನಲಕ್ಷ್ಮೀ ಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಹುಮಾನ.? 50 ಲಕ್ಷ ರೂಪಾಯಿಗೆ ಬಹುಮಾನಕ್ಕೆ ವಿಪಕ್ಷಗಳಿಂದ ಬೇಡಿಕೆ.!

ಬೆಳಗಾವಿ: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಮಹಿಳಾ ವಿಶ್ವಕಪ್ ಕಬ್ಬಡಿ ತಂಡದ ವಿಜೇತ ಸದಸ್ಯೆ ಧನಲಕ್ಷ್ಮೀ ಪೂಜಾರಿಗೆ ರಾಜ್ಯ ಸರ್ಕಾರದಿಂದ ಅಭಿನಂದನೆ ಸಲ್ಲಿಸುವ ಜೊತೆಗೆ ವಿಶೇಷ ಬಹುಮಾನವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ವಿಶ್ವಕಪ್ ಭಾರತ ಮಹಿಳಾ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಏಕೈಕ ಆಟಗಾರ್ತಿಯಾಗಿದ್ದ ಧನಲಕ್ಷ್ಮೀ ಪೂಜಾರಿ ಇಂದು ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ವೀಕ್ಷಣೆ ಮಾಡಲು ತೆರಳಿದ್ದ ಸಂಧರ್ಭದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಧನಲಕ್ಷ್ಮೀ ಹಾಗೂ ಆಕೆಯ ಕೋಚ್ ಸಾಧನೆಯನ್ನು ಸದನಕ್ಕೆ ತಿಳಿಸಿದರು ಅವರು ಸದ್ಯ ವಿಧಾನಸಭೆಯ ಅಧಿವೇಶನವನ್ನು ವೀಕ್ಷಿಸುತ್ತಿರುವುದಾಗಿಯೂ ಸದನಕ್ಕೆ ತಿಳಿಸಿದರು.

ವಿಧಾನಸಭಾ ಕಲಾಪಕ್ಕೆ ಮುಖ್ಯಮಂತ್ರಿಗಳು ಆಗಮಿಸಿದಾಗ ಧನಲಕ್ಷ್ಮೀಯವರಿಗೆ ಅಭಿನಂದನೆಯನ್ನು ಸಲ್ಲಿಸುವುದರ ಜೊತೆಗೆ ಸರ್ಕಾರದ ಕಡೆಯಿಂದ ಐದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿರುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳ ಮಾತಿಗೆ ಎದ್ದು ನಿಂತು ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಧನಲಕ್ಷ್ಮೀ ಹಾಗೂ ಕೋಚ್ ಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಧನಲಕ್ಷ್ಮೀಯವರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಮನವಿ ಮಾಡಿದರು. ಆ ಬಳಿಕ ಶಾಸಕ ಭರತ್ ಶೆಟ್ಟಿ ಇನ್ನೂ ಹೆಚ್ಚಿನ ಬಹುಮಾನ ಮೊತ್ತವನ್ನು ಘೋಷಿಸಬೇಕು. ಕ್ರಿಕೆಟ್ ಹಾಗೂ ಇನ್ನಿತರ ಕ್ರೀಡೆಗಳಿಗೆ ಘೋಷಿಸುವಂತೆ ಒಂದು ಕೋಟಿ ಅಥವಾ ಐವತ್ತು ಲಕ್ಷ ಬಹುಮಾನ ಮೊತ್ತವನ್ನು ಸರ್ಕಾರ ಘೋಷಿಸಬೇಕು ಎಂದು ಮನವಿ ಮಾಡಿದರು. 


Post a Comment

0 Comments