ಜವನೆರ್ ಬೆದ್ರ ಫೌಂಡೇಶನ್'ನ ಮತ್ತೊಂದು ಕನಸು ನನಸು.! 'ಅಬ್ಬಕ್ಕ' ಪ್ರತಿಮೆ ಲೋಕಾರ್ಪಣೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮೂಡುಬಿದ್ರೆ: ಅಧುನಿಕ ಸಮಾಜದಲ್ಲಿ ನೂರಾರು ಸಂಘ ಸಂಸ್ಥೆಗಳು ಸಮಾಜದ ಶ್ರೆಯೋಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಂಘ ಸಂಸ್ಥೆಗಳಲ್ಲಿ ಬೆದ್ರದ ಜವನೆರ್ ಬೆದ್ರ ಫೌಂಡೇಶನ್(ರಿ.) ಕೂಡ ಒಂದು. ಅಮರ್ ಕೋಟೆ ನೇತೃತ್ವದಲ್ಲಿ ನೂರಾರು ಯುವಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಸ್ವಚ್ಚತೆ, ಆರೋಗ್ಯ, ಧಾರ್ಮಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುವ ಮೂಲಕ ಮೂಡುಬಿದ್ರೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸದ್ಯ ಮತ್ತೊಂದು ಹೊಸ ಕಾರ್ಯದ ಮೂಲಕ ಜವನೆರ್ ಬೆದ್ರ ಫೌಂಡೇಶನ್(ರಿ.) ತನ್ನ ಬಹುಕಾಲದ ಕನಸೊಂದನ್ನು ನನಸು ಮಾಡಿಕೊಂಡಿದೆ.

ಹೌದು, ಉಳ್ಳಾಲದ ರಾಣಿ ಅಬ್ಬಕ್ಕ ಮೂಡುಬಿದ್ರೆಯ ಮಣ್ಣಿನ ಮಗಳು, ಅವಳಿಗೆ ಮೂಡುಬಿದ್ರೆಯ ಮಣ್ಣಿನಲ್ಲಿ ಅಧ್ಬುತವಾದ ಪ್ರತಿಮೆ ನಿರ್ಮಾಣವಾಗಬೇಕು. ಆ ಪ್ರತಿಮೆ ಮೂಡುಬಿದ್ರೆಯ ಕೇಂದ್ರ ಬಿಂದುವಾಗಿರುವ ಯಾವುದಾದರೂ ಒಂದು ಸ್ಥಳದಲ್ಲಿರಬೇಕು ಎಂಬುದು ಜವನೆರ್ ಬೆದ್ರದ ಆಶಯವಾಗಿತ್ತು ಅದರೆ ಬದಲಾದ ಸನ್ನಿವೇಶದಲ್ಲಿ ಅದು ಬೇರೆ ತಿರುವು ಪಡೆಯಿತು ಅದರೆ ಹಿಡಿದ ಹಠ ಸಾಧಿಸದೇ ಬಿಡೇನೂ ಎನ್ನುವ ಮಾತಿನಂತೆ ಜವನೆರ್ ಬೆದ್ರ ಫೌಂಡೇಶನ್(ರಿ.) ಚೌಟರ ಅರಮನೆಯ ಎದುರುಗಡೆ ಅಬ್ಬಕ್ಕ ಕಿರು ಉದ್ಯಾನವನ ನಿರ್ಮಾಣ ಮಾಡಿ ಕಿರಿದಾದ ಅಬ್ಬಕ್ಕ ಪ್ರತಿಮೆಯನ್ನು ಸ್ಥಾಪಿಸಿತು. ಈ ಮೂಲಕ ತಾವೂ ಕಂಡ ಕನಸನ್ನು ಸುಮಾರು ೬ ವರ್ಷಗಳ ಹಿಂದೆಯೇ ನನಸು ಮಾಡಿಕೊಂಡರು.

ಪ್ರಸ್ತುತ ಅಬ್ಬಕ್ಕಳ ಕಿರಿದಾದ ಪ್ರತಿಮೆಯ ಬದಲಿಗೆ ೬.೫ ಆಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿ ಆ ಮೂಲಕ ಅದನ್ನು ನಿರ್ಮಾಣ ಮಾಡಿದರು. ಈ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವೂ ನವಂಬರ್ ೧ರ ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವ ದಿನೇಶ್ ಗುಂಡೂರಾವ್ ಕೈಯಿಂದ ನೆರೆವೆರಿತು. ಈ ಸುಂದರ ಕಾರ್ಯಕ್ರಮದಲ್ಲಿ ಮೂಡುಬಿದ್ರೆಯ ಜೈನ ಮಠದ ಮಹಾಸ್ವಾಮಿಜಿಗಳಾದ ಡಾ ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.

ದಿನೇಶ್ ಗುಂಡೂರಾವ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರೆ, ಡಾ ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯವರು ನಾಮಫಲಕವನ್ನು ಲೋಕಾರ್ಪಣೆಗೊಳಿಸಿದರು. ಪ್ರತಿಮೆ ಲೋಕಾರ್ಪಣೆಯ ಬಳಿಕ ಮಾತನಾಡಿದ ಸಚಿವರು ಪೋರ್ಚುಗೀಸರ ವಿರುದ್ದ ಒರ್ವ ಮಹಿಳೆಯಾಗಿ ಹೋರಾಡಿ ಆನೇಕ ಯುದ್ದಗಳನ್ನು ಮಾಡಿರುವ ಅಬ್ಬಕ್ಕಳ ಕುರಿತಾಗಿ ಪಠ್ಯ ಕ್ರಮದಲ್ಲಿ ಸೇರಿಸುವ ಅಗತ್ಯವಿದೆ ಈ ಕುರಿತು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಫೌಂಡೇಶನ್'ನ ಈ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಭಿನಂದಿಸಿದರು. 



ಜವನೆರ್ ಬೆದ್ರ ಫೌಂಡೇಶನ್ ನಿಂದ ಸಚಿವರಿಗೆ ಮನವಿ ಪತ್ರ:

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಸಂಘಟನೆ ಮೂರು ಮನವಿಗಳನ್ನು ಸಲ್ಲಿಸಿತು. ಮೂಡಬಿದ್ರೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿಸಲು, ಮೂಡಬಿದ್ರೆಯಲ್ಲಿ ಸರ್ಕಾರಿ ರಕ್ತ ಬ್ಯಾಂಕ್ ಹಾಗೂ  ರಕ್ತ ಶೇಖರಣಾ ಘಟಕ ಸ್ಥಾಪನೆಗೆ, ರಾಣಿ ಅಬ್ಬಕ್ಕಳ ಸಂಶೋಧನ ಕೇಂದ್ರ ಸ್ಥಾಪನೆ ಸೇರಿ ಈ ಮೂರು ವಿಷಯಗಳ ಬಗೆಗೆ ಮನವಿ ಮಾಡಲಾಯಿತು.

ಜೈನ ಮಠದ ಮಹಾಸ್ವಾಮಿಗಳು ಮಾತನಾಡಿ ಜವನೆರ್ ಬೆದ್ರ ಸಂಘಟನೆ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರುತ್ತಿದೆ ಸದ್ಯ ಅಬ್ಬಕ್ಕಳ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಬಹುದಿನಗಳ ಕನಸು ನನಸಾಗಿದೆ ಎಂದರು. ಇದೇ ರೀತಿಯ ಕೆಲಸ ಕಾರ್ಯಗಳು ಜವನೆರ್ ಬೆದ್ರ ಸಂಘಟನೆಯಿಂದ ಭವಿಷ್ಯದಲ್ಲೂ ಮೂಡಿ ಬರಲಿ. ಇದೊಂದು ಚರಿತ್ರೆಯಲ್ಲಿ ಉಳಿಯುವ ಕೆಲಸ ಎಂದು ಬಣ್ಣಿಸಿದರು.

ಜೈನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಪ್ರಭಾತ್ ಜೈನ್ ಅವರು ಅಬ್ಬಕ್ಕ'ಳ ಇತಿಹಾಸದ ಕುರಿತು ವಿಶೇಷವಾದ ವಿಚಾರ ಮಂಡಿಸಿದರು. ಮೂರ್ತಿಯ ಶಿಲ್ಪಿ ಕುಂಬ್ಲೆಯ ವೇಣುಗೋಪಾಲ್ ಆಚಾರ್ಯ ಅವರನ್ನು ಇದೇ ಸಮಯದಲ್ಲಿ ಗೌರವಿಸಲಾಯಿತು.

ಶ್ರೀ ಕ್ಷೇತ್ರ ಪುತ್ತಿಗೆಯ ಅನುವಂಶಿಕ ಆಡಳಿತ ಮೊಕೇಸ್ತರರು ಹಾಗೂ ಚೌಟ ಅರಮನೆಯ ಮುಖ್ಯಸ್ಥರದ ಶ್ರೀ ಕುಲದೀಪ್ ಎಂ, ಶ್ರೀ ಉಮಾನಾಥ ಕೋಟ್ಯಾನ್ ಶಾಸಕರು, ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಮೂಡುಬಿದ್ರೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಥುನ್ ರೈ, ಮೂಡ ಅಧ್ಯಕ್ಷರಾದ ಶ್ರೀ ಹರ್ಷವರ್ಧನ್  ಪಡಿವಾಲ್, ಮೂಡುಬಿದ್ರೆ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಇಂದು, ಪುರಸಭಾ ಸದಸ್ಯರಾದ ಶ್ರೀಮತಿ ಶಕುಂತಲಾ ದೇವಾಡಿಗ ಹಾಗೂ ಜವನೆರ್ ಬೆದ್ರ ಫೌಂಡೇಶನ್(ರಿ.) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಅಂಗ ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಪಧಾಧಿಕಾರಿಗಳು ಭಾಗಿಯಾಗಿದ್ದರು. 









ಸಂದೀಪ್ ಕೆಲ್ಲಪುತ್ತಿಗೆ ಈ ಎಲ್ಲಾ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ತೆಗದುಕೊಂಡರು. 


Post a Comment

0 Comments