MESHOO LOOT OFFER ಫೇಕ್ ಲಿಂಕ್.! ನಿಮಗೂ ಲಿಂಕ್ ಬಂದಿದ್ದಾರೆ ಈ ಸುದ್ದಿ ನೋಡಿ.? Social Media ಖಾತೆ ಹ್ಯಾಕ್.!

MEESHOO LOOT OFFER ಎಂಬ Caption ಹೊಂದಿರುವ ಲಿಂಕ್ ಒಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಲಿಂಕ್ ತೆರೆದ ತಕ್ಷಣ ಕೆಲ ಪ್ರಶ್ನೆಗಳು ಕಾಣ ಸಿಗುವುದಲ್ಲದೆ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೇಳುವ ಮೂಲಕ ಸೈಬರ್ ಕಳ್ಳರು ವೈಯಕ್ತಿಕ ಮಾಹಿತಿಯನ್ನು ಕದಿಯುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಫೇಕ್ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಹಾಗೂ ಇತರರಿಗೂ ಫಾರ್ವಡ್ ಮಾಡಬೇಡಿ ಎಂದು ಎಷ್ಟು ಬಾರಿ ಸಂದೇಶಗಳ ಮೂಲಕ ಎಚ್ಚೆತ್ತುಕೊಳ್ಳದ ಮತ್ತೇ ಅದೇ ತಪ್ಪನ್ನು ಮಾಡುವ ಮೂಲಕ ಸೈಬರ್ ಕಳ್ಳರ ಜಾಲಕ್ಕೆ ಬೀಳುತ್ತಿದ್ದಾರೆ.

LOOT OFFER ಲಿಂಕ್ ಕ್ಲಿಕ್ ಮಾಡಿದ ಆನೇಕರ ವ್ಯಾಟ್ಸಾಪ್ ಖಾತೆಗೆಳು ಹ್ಯಾಕ್ ಆಗಿದ್ದು ಅವುಗಳಿಂದ ಅವರ ಸ್ನೇಹಿತರಿಗೆ ತುರ್ತು ಹಣಕ್ಕೆ ಬೇಡಿಕೆಯ ಸಂದೇಶಗಳು ರವಾನೆಯಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದೆ. ಮಾತ್ರವಲ್ಲದೆ ಕೆಲ Auto Generated Links ಗಳು ಬೇರೆ ಬೇರೆ ಗ್ರೂಪ್ ಗಳಿಗೆ ಆ ಹ್ಯಾಕ್ ಆದ ಖಾತೆಗಳಿಂದ ರವಾನೆಯಾಗುತ್ತಿದ್ದು ಆನೇಕರಿಗೆ ಇದು ಏನು ಎಂಬುದು ತಿಳಿಯದೇ ಆನೇಕರು ಗೊಂದಲಕ್ಕೆ ಒಳಗಾಗಿದ್ದಾರೆ.

ಈ ರೀತಿಯ ಲಿಂಕ್ ಗಳನ್ನು ದಯವಿಟ್ಟು ಕ್ಲಿಕ್ ಮಾಡಬೇಡಿ,ಇದರಿಂದ ನಿಮ್ಮ ಖಾಸಗೀ ಮಾಹಿತಿಗಳ ಜೊತೆಗೆ ಹಣಕಾಸಿನ ಮಾಹಿತಿಗಳು ಸೋರಿಕೆಯಾಗುವ ಸಂಭವವಿದೆ. ಅದ್ದರಿಂದ ಮುಂದಿನ ಬಾರಿ ಯಾವುದೇ ಲಿಂಕ್ ಹಾಗೂ ಎ.ಪಿ.ಕೆ ಫೈಲ್ ಗಳನ್ನು ತೆರೆಯುವಾಗ ಎಚ್ಚರ ವಹಿಸಿ. ಹಾಗೂ ನಿಮ್ಮ ಸಾಮಾಜಿಕ ಜಾಲತಾಣಗಳಿಗೆ Two Factor Authentication ನ್ನು ON ಮಾಡುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿ.


Post a Comment

0 Comments