ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿ ಹಾಗೂ ಕಾರ್ಯಕರಣಿ ಸದಸ್ಯರ ಆಯ್ಕೆಯ ಚುನಾವಣೆ ಭಾನುವಾರ ವಾರ್ತಾ ಕಚೇರಿಯಲ್ಲಿ ನಡೆಯಿತು. ಇಂದು ನಡೆದ ಚುನಾವಣೆಯಲ್ಲಿ ಮೂಡುಬಿದ್ರೆ ಪತ್ರಕರ್ತರ ಸಂಘದ ಉಪಾಧ್ಯಕ್ಷರು ಹಾಗೂ ಹೊಸ ದಿಗಂತ ವರದಿಗರಾರದ ಹರೀಶ್ ಕೆ ಅದೂರ್ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕರಣಿ ಸದಸ್ಯರಾಗಿ ಚುನಾವಣೆಯಲ್ಲಿ ಆಯ್ಕೆಯಾದರು.
ಈ ಚುನಾವಣೆಯಲ್ಲಿ ಹರೀಶ್ ಕೆ ಅದೂರ್ ೧೫೨ ಮತಗಳನ್ನು ಗಳಿಸುವ ಮೂಲಕ ಹರೀಶ್ ಕೆ ಅದೂರು ಕಾರ್ಯಕರಣಿ ಸದಸ್ಯರಾಗಿ ಆಯ್ಕೆಯಾದರು. ಹರೀಶ್ ಕೆ ಅವರ ಆಯ್ಕೆಗೆ ಅವರ ಬಂಧು-ಮಿತ್ರರು ಹಾಗೂ ಹಿತೈಸಿಗಳು ಶುಭಾಶಯ ಕೋರಿದ್ದಾರೆ.
0 Comments