ಆಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಧರ್ಮ ಧ್ವಜಾರೋಹಣ.! 500 ವರ್ಷಗಳ ಪ್ರತಿಜ್ಞೆ ಕೊನೆಗೂ ಪೂರ್ಣ.?

ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಆಯೋಧ್ಯೆಯ ರಾಮಮಂದಿರದಲ್ಲಿ ಧರ್ಮ ಧ್ವಜಾರೋಹಣವನ್ನು ಏರಿಸಲಿದ್ದಾರೆ. ೧೦ ಆಡಿ ಉದ್ದ ಹಾಗೂ ೨೦ ಆಡಿ ಆಗಲವಾಗಿರುವ ಈ ಧ್ವಜ ತ್ರಿಕೋಣಕಾರದಲ್ಲಿದ್ದು ದೇವಸ್ಥಾನದ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಈ ಮೂಲಕ ಸೂಚಿಸಲಾಗುತ್ತದೆ. 



ಸಪ್ತ ದೇವಸ್ಥಾನಗಳ ದರ್ಶನದ ಬಳಿಕ, ಆಯೋಧ್ಯೆಯ ಬಾಲರಾಮನಿಗೆ ಸಂಕಲ್ಪ ಪೂಜೆ ಸಲ್ಲಿಸಿದ ಬಳಿಕ ಧರ್ಮ ದ್ವಜಾರೋಹಣ ಏರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಗೆ ಆರ್.ಎಸ್.ಎಸ್ ನ ಮುಖ್ಯಸ್ಥರಾದ ಮೋಹನ್ ಭಾಗವತ್ ಸಾಥ್ ನೀಡಿದ್ದು, ಸುಮಾರು ೬೦೦೦ಕ್ಕೂ ಅಧಿಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಒಟ್ಟಾರೆಯಾಗಿ ಅಸಂಖ್ಯಾತ ಹಿಂದೂಗಳು ೫೦೦ ವರ್ಷಗಳ ಹಿಂದೆ ಮಾಡಿದ್ದ ಆ ಒಂದು ಪ್ರತಿಜ್ಞೆಿ ಇಂದು ದೇವಸ್ಥಾನದ ಸಂಪೂರ್ಣ ಕಾರ್ಯ ಪೂರ್ಣಗೊಳ್ಳುವ ಮೂಲಕ ನೆರವೆರಿದೆ.


Post a Comment

0 Comments