ದೀಪಾವಳಿಯ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆಯೇ ತುಳುವರು.? ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿದೆ ತುಳುವೆರ್ನಾ ಪರ್ಬ.!

ದೀಪಾವಳಿ ಹಬ್ಬವೆಂದರೆ ಅದೇನೋ ಸಂಭ್ರಮ, ಸಡಗರ. ಮನೆಮಂದಿಯೆಲ್ಲಾ ಸೇರಿ ಆ‍ಚರಿಸುವ ಹಬ್ಬಗಳಲ್ಲಿ ಈ ದೀಪಾವಳಿ ಮೊದಲು. ಮೂರು ದಿನ ಭಾರೀ ಸಂಭ್ರಮದಿಂದ ಆಚರಿಸುವ ಈ ದೀಪಾವಳಿ ಸಡಗರದಲ್ಲಿ ಮೊದಲನೆ ದಿನ ನರಕ ಚತುದರ್ಶಿ. ಸ್ನಾನ ಮಾಡುವ ಹಂಡೆಯನ್ನು ಸ್ವಚ್ಚಗೊಳಿಸಿ ಅದಕ್ಕೆ ಹೂವುಗಳಿಂದ ಸಿಂಗಾರಿಸಿ ಹಂಡೆಯಲ್ಲಿ ನೀರು ಕಾಯಿಸುವುದು ಪದ್ದತಿ. ಆ ಬಳಿಕ ಮುಡಿಯಿಂದ ಪಾದದವರೆಗೆ ಗಾಣದಿಂದ ತಯಾರಿಸಿದ ತೆಂಗಿನ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದು ಮೂಲ ಆಚರಣೆ. ಕೃಷಿ ಕಾಯಕದಲ್ಲಿ ಸದಾ ತೊಡಗಿರುವ ತುಳುವರು ದೀಪಾವಳಿಗೆ ಭಾರೀ ಮಹತ್ವವನ್ನು ನೀಡುತ್ತಾರೆ. ಆಭ್ಯಂಜನ ಸ್ನಾನದ ಬಳಿಕ ದೋಸೆ ಹಾಗೂ ಅವಲಕ್ಕಿ ಸವಿಯುವ ಪದ್ದತಿಯೂ ಇದೆ. ಪರ್ಬದ ಮರ ಪಾಡುನ ಎಂಬ ಆಚರಣೆಯೂ ಇಲ್ಲಿ ಕಾಣಸಿಗುತ್ತದೆ.

ದೀಪಾವಳಿಯ ಎರಡನೇ ದಿನದಲ್ಲಿ ಲಕ್ಷ್ಮೀ ಪೂಜೆಯನ್ನು ಆಚರಿಸಿದರೆ. ಬೇರೆ ಬೇರೆ ಪ್ರದೇಶಗಳಲ್ಲಿ ತಮ್ಮ ಪ್ರಾಂತ್ಯದ ಆಚರಣೆಗಳನ್ನು ಕಾಣಬಹುದು. ದೀಪಾವಳಿ ಕೊನೆಯೆ ದಿನ ಆತ್ಯಂತ ಸಂಭ್ರಮದ ಸಡಗರದ ದಿನ ಅದುವೇ ಬಲಿಪಾಡ್ಯಮಿ. ಬಲಿಚಕ್ರವರ್ತಿಯನ್ನು ನೆನಪಿಸಿಕೊಳ್ಳುವ ಈ ದಿನದಲ್ಲಿ ಗೋ ಪೂಜೆ, ಅಂಗಡಿ ಪೂಜೆಗಳನ್ನು ಆಚರಿಸುತ್ತಾರೆ. ವೈಧಿಕತೆಗಳ ನೆಲೆಗಟ್ಟಿನ ಹೊರತಾಗಿ ನಡೆಯುವುದು ದೀಪಾವಳಿಯ ಮೂಲ ನಿಯಮ.'

ಬಲಿಚಕ್ರವರ್ತಿಯನ್ನು ಕರೆಯುವುದರ ಮೂಲಕ ನೆನಪಿಸಿಕೊಳ್ಳುವುದು ಮತ್ತೊಂದು ವಿಶೇಷ. ಮಾತ್ರವಲ್ಲದೆ ಬಲಿಪಾಡ್ಯಮಿಯ ದಿನದಂದು ಮಾಂಸದ ಆಡುಗೆಯನ್ನು ಮಾಡಿ ಪಿತೃಗಳಿಗೆ ಇಡುವ ಪದ್ದತಿ ಬಹುತೇಕ ಎಲ್ಲಾ ಮನೆಗಳಲ್ಲಿದೆ.

ಹಾದಿ ತಪ್ಪುತ್ತಿರುವ ದೀಪಾವಳಿ ಆಚರಣೆ:

ದೀಪಾವಳಿ ಹಬ್ಬಕ್ಕೆ ಯುಗ ಯುಗಗಳ ಇತಿಹಾಸವಿದೆ. ರಾಮ ರಾವಣನ ಸಂಹಾರ ಮಾಡಿ ಆಯೋಧ್ಯೆಗೆ ಮರಳಿದ ಶುಭ ದಿನವೇ ಈ ದೀಪಾವಳಿ. ಪಂಚ ಪಾಂಡವರು ವನವಾಸ ಹಾಗೂ ಅಜ್ಞಾತವಾಸ ಮುಗಿಸಿ ಮತ್ತೇ ಆಸ್ಥಿನಪುರಕ್ಕೆ ಆಗಮಿಸಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಅದರೆ ಪ್ರಸ್ತುತ ದಿನಮಾಗಳಲ್ಲಿ ದೀಪಾವಳಿಯ ಆಚರಣೆ ತನ್ನ ಹಾದಿಯನ್ನು ತಪ್ಪುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ರೀತಿಯಲ್ಲಿ ಪಾರ್ಟಿಗಳನ್ನು ಆಚರಿಸುತ್ತಿರುವುದು ಖೇಧಕರ. ದೀಪಾವಳಿಯ ಮೂಲ ತತ್ವವನ್ನು ಮರೆತು ಹೊ‍ಸ ಆಚರಣೆಯತ್ತ ಮುಖ ಮಾಡುತ್ತಿರುವುದು ಅತ್ಯಂತ ದುಃಖದ ವಿಷಯ.

ಪಟಾಕಿಯನ್ನು ಹೊಡೆಯುವ ಉತ್ಸಾಹ ಕಳೆದುಕೊಂಡಿರುವ ಮಕ್ಕಳು:

ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದೇ ಒಂದು ಚೆಂದ. ಅದರೆ ಇಂದಿನ ಮಕ್ಕಳು ಪಟಾಕಿ ಹೊಡೆಯುವ ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಮೊಬೈಲ್, ಕಂಪ್ಯೂಟರ್ ಗೀಳಿಗೆ ಬಿದ್ದಿರುವ ಇಂದಿನ ಮಕ್ಕಳು ಪಟಾಕಿಯನ್ನು ಹೊಡೆಯುವ ಉತ್ಸಾಹವೇ ಕಳೆದುಕೊಂಡಿದ್ದಾರೆ. ಸಣ್ಣ ಸಣ್ಣ ಪಟಾಕಿಗಳಲ್ಲಿ ಹೊಡೆದು ಖುಷಿಪಡುತ್ತಿದ್ದ ಕಾಲ ಮರೆಯಾಗಿ ವರ್ಷಗಳೇ ಕಳೆದಿದೆ. ಹಾದಿ ತಪ್ಪುತ್ತಿರುವ ದೀಪಾವಳಿಯ ಆಚರಣೆ ಸರಿಯಾದ ಕ್ರಮದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುವಂತಾಗಲಿ. ಮುಂದಿನ ಬಾರಿಯ ದೀಪಾವಳಿ ಆಚರಣೆ ಅರ್ಥ ಪೂರ್ಣವಾಗಲಿ.


Post a Comment

0 Comments