ಕಂದಾಯ ಸಚಿವ ಕೃಷ್ಣಭೈರೇ ಗೌಡರ ದಕ್ಷ ಕಾರ್ಯವೈಖರಿಗೆ ಮೆಚ್ಚುಗೆಗಳ ಮಹಾಪೂರ.!

ದಕ್ಷತೆಯಿಂದ ಯಾರೇ ಕೆಲಸ ನಿರ್ವಹಿಸಿದರೇ ಅವರ ಕಾರ್ಯಕ್ಕೊಂದು ಧರ್ಮ, ಜಾತಿ, ಪಕ್ಷ ಭೇದ ಮೆರೆತು ಮೆಚ್ಚುಗೆ ಸೂಚಿಸಬೇಕು. ಅದು ಇನ್ನೊಬ್ಬರಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಹಾಯಕವಾಗುತ್ತದೆ. ರಾಜಕಾರಣದಲ್ಲಿ ಅಧಿಕಾರದ ಗದ್ದುಗೆ ಏರಿದ ಬಳಿಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳು ಬೆರಳಣಿಕೆಯಷ್ಟು ಜನ ಮಾತ್ರ. ಅಂತಹ ಸಾಲಿನಲ್ಲಿ ಕಾಣಸಿಗುವ ಒರ್ವ ಜನಪ್ರತಿನಿಧಿಯೆಂದರೆ ಕೃಷ್ಣ ಭೈರೇ ಗೌಡ. ಹಲವಾರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಭೇರೇ ಗೌಡರು ತನಗೆ ಕೊಟ್ಟ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ನಿರ್ವಹಿಸುತ್ತಾರೆ. ಈ ಹಿಂದೆ ಕೃಷಿ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದ ಭೈರೇಗೌಡರು ಈ ಬಾರಿ ಕಂದಾಯ ಸಚಿವರಾಗಿ ತಮ್ಮ ಕಾರ್ಯಕ್ಷಮತೆಗೆ ಮುಖ್ಯಮಂತ್ರಿಯಿಂದಲೇ ಶಹಬ್ಬಾಸ್ ಎನಿಸಿಕೊಂಡವರು.

ಕಂದಾಯ ಖಾತೆಯ ಜೊತೆಗೆ ಇತ್ತೀಚೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಕೃಷ್ಣಭೈರೇ ಗೌಡರಿಗೆ ಹಾಸನಾಂಬ ದೇವಾಲಯದ ನಿರ್ವಹಣೆಯ ಜವಾಬ್ದಾರಿಯಾ ಸವಾಲು ಸಿದ್ದವಾಗಿತ್ತು. ಕೃಷ್ಣ ಭೈರೇ ಗೌಡರು ತಮ್ಮ ಸಮರ್ಥ ಕಾರ್ಯ ನಿರ್ವಹಣೆಯಿಂದ ಅಧಿಕಾರಿಗಳ ಜೊತೆಗೂಡಿ ದಿನಕ್ಕೆ ೧೮ ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ಹಾಸನಾಂಬ ದೇವಿಯ ದರ್ಶನದಲ್ಲಿ ಯಾವುದೇ ಲೋಪವಾಗದಂತೆ ಕೆಲಸ ನಿರ್ವಹಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರರಾದರು. ಈ ಬಾರಿ ಸುಮಾರು ೨೩ ಲಕ್ಷಕ್ಕೂ ಅಧಿಕ ಜನರು ದರ್ಶನ ಪಡೆದಿದ್ದು ಯಾವುದೇ ಸಣ್ಣ ಲೋಪವೂ ಆಗದೇ ಇರುವುದು ಸಚಿವರ ಕಾರ್ಯವೈಖರಿಗೆ ಮತ್ತೊಂದು ಸಾಕ್ಷಿ. ಈ ಮೂಲಕ ಕೃಷ್ಣಭೈರೇ ಗೌಡರು ತಮ್ಮ ಕಾರ್ಯವೈಖರಿಯ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


Post a Comment

0 Comments