Kantara-1 ಮೂವಿ Review.! ಜನರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಿಲ್ವಾ ಚಿತ್ರತಂಡಕ್ಕೆ.?

ಭಾರತೀಯ ಚಿತ್ರರಂಗದಲ್ಲಿ ಕಾಂತಾರ ಚಲನಚಿತ್ರ ಒಂದು ಹೊಸ ಭಾಸ್ಯವನ್ನು ಬರೆದ ಚಿತ್ರವಾಗಿದೆ. ಕಾಂತಾರ-೨ ಜನರಿಂದಲೇ ಪ್ರಚಾರ ಮಾಡಲ್ಪಟ್ಟು ಅತೀ ಹೆಚ್ಚು ಜನಪ್ರಿಯ ಪಡೆದ ಚಿತ್ರ. ಈ ಚಿತ್ರದ ಮೊದಲ ಭಾಗ ಜನರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು, ಈ ಎಲ್ಲಾ ನಿರೀಕ್ಷೆಗಳನ್ನು ಮುಟ್ಟಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಉತ್ತರ ಆಕ್ಟೋಬರ್ ೨ ರಂದು ಸಿಕ್ಕಿದ್ದು ವಿಜಯ ದಶಮಿಯ ಪುಣ್ಯದಿನದಂದು ಪ್ರಪಂಚದಾದ್ಯಂತ ಈ ಚಿತ್ರ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಆರಂಭವನ್ನು ಪಡೆದುಕೊಂಡಿದೆ.

Positive Reviews

ಕಥೆಯ ಸಾಂಸ್ಕೃತಿಕ ಹಿನ್ನೆಲೆ:

ಚಿತ್ರವು ತುಳುನಾಡಿನ ದೈವ ಸಂಸ್ಕೃತಿ, ಭೂತಾರಾಧನೆ ಮತ್ತು ನೈಸರ್ಗಿಕ ಬದುಕಿನ ಹಿನ್ನೆಲೆಯ ಕಥೆಯನ್ನು ಅತ್ಯಂತ ಭಾವನಾತ್ಮಕವಾಗಿ ತೋರಿಸಿದೆ. ಇದು ಕನ್ನಡ ಚಿತ್ರರಂಗದಲ್ಲಿ ವಿರಳ.

ರಿಷಬ್ ಶೆಟ್ಟಿ ಅವರ ಅಭಿನಯ ಮತ್ತು ನಿರ್ದೇಶನ:

ರಿಷಬ್ ಶೆಟ್ಟಿ ಅವರು ನಾಯಕನಾಗಿ ಹಾಗೂ ನಿರ್ದೇಶಕರಾಗಿ ಎರಡೂ ಕ್ಷೇತ್ರಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂತ್ಯದ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ನಲ್ಲಿ ಅವರ ಅಭಿನಯ goosebumps ತರಿಸುತ್ತದೆ.

ಹಿನ್ನೆಲೆ ಸಂಗೀತ (BGM) ಮತ್ತು ಸೌಂಡ್ ಡಿಸೈನ್:

BGM ಚಿತ್ರಕ್ಕೆ ಜೀವ ತುಂಬುತ್ತದೆ. ವಿಶೇಷವಾಗಿ ಕೊನೆಯ ಭಾಗದ ದೈವಿಕ ಸೀಕ್ವೆನ್ಸ್‌ನಲ್ಲಿ ಸಂಗೀತ ಅತ್ಯಂತ ತೀವ್ರ ಭಾವನೆ ಮೂಡಿಸುತ್ತದೆ.

Cinematography:

ಅರಣ್ಯ, ಹಳ್ಳಿಯ ವಾತಾವರಣ ಮತ್ತು ಸಂಸ್ಕೃತಿಯನ್ನು ನೈಸರ್ಗಿಕವಾಗಿ ಹಿಡಿದಿಟ್ಟಿರುವ ದೃಶ್ಯಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ತೋರಿಸುತ್ತವೆ.

ಸ್ಥಳೀಯ ಕಥೆಯ ವಿಶ್ವಮಟ್ಟದ ಆಕರ್ಷಣೆ:

ಭಾರತೀಯ ಸಂಸ್ಕೃತಿಯ ಮೂಲ ಕಥೆಯನ್ನು, ಹಳ್ಳಿ-ದೈವಗಳ ಪ್ರಾಮುಖ್ಯತೆಯನ್ನು ಜಾಗತಿಕ ವೇದಿಕೆಯ ಮೇಲೆ ತೋರಿಸಿರುವುದು ವಿಶಿಷ್ಟ.

ನೆಗಟಿವ್ ವಿಮರ್ಶೆಗಳು (Negative Reviews)

ಮಧ್ಯಭಾಗದ ನಿಧಾನಗತಿ:

ಚಿತ್ರ ಆರಂಭ ಮತ್ತು ಅಂತ್ಯ ಭಾಗಗಳು ಶಕ್ತಿಶಾಲಿ ಆದರೆ ಮಧ್ಯದಲ್ಲಿ ಕಥೆ ಸ್ವಲ್ಪ ನಿಧಾನಗತಿಯಾಗಿ ಸಾಗುತ್ತದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.

ಮಹಿಳಾ ಪಾತ್ರದ ಸೀಮಿತ ವಿವರಣೆ:

ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ಅತ್ಯುತ್ತಮವಾಗಿ ತೋರಿಸಲಾಗಿದ್ದರು ಕೂಡ ಆ ಪಾತ್ರದ ಹಿನ್ನಲೆಯನ್ನು ವಿವರಿಸುವಲ್ಲಿ ಸ್ವಲ್ಪ ಮಟ್ಟಿಗೆ ವಿಫಲವಾದಂತೆ ಕಾಣುತ್ತಿದೆ. ಕೆಲ ಪ್ರೇಕ್ಷಕರಿಗೆ ಪಾತ್ರದ ಹಿನ್ನಲೆ ಸರಿಯಾಗಿ ತಲುಪಿಲ್ಲ ಎಂಬುದು ಕೆಲವರ ಮಾತು.

ಹಿಂಸಾತ್ಮಕ ದೃಶ್ಯಗಳು:

ಕೆಲವು ಕ್ಲೈಮ್ಯಾಕ್ಸ್ ಭಾಗಗಳು ಹೆಚ್ಚು ಹಿಂಸಾತ್ಮಕವಾಗಿವೆ — ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಸೂಕ್ತವಾಗಿಲ್ಲ.

ಸಾಂಸ್ಕೃತಿಕ ಅರ್ಥೈಸುವಿಕೆಗೆ ಪೂರಕ ವಿವರಣೆ ಕೊರತೆ:

ದೈವ ಸಂಸ್ಕೃತಿಯನ್ನು ತಿಳಿಯದ ಪ್ರೇಕ್ಷಕರಿಗೆ ಕೆಲವು ಭಾಗಗಳು ಅರ್ಥವಾಗದೇ ಇರಬಹುದು. ಹೆಚ್ಚಿನ ವಿವರಣೆ ಅಥವಾ ಹಿನ್ನೆಲೆ ನೀಡಿದ್ದರೆ ಉತ್ತಮವಾಗುತ್ತಿತ್ತು.

ತುಳುನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ:

ಕಾಂತಾರ ಚಿತ್ರದಲ್ಲಿ ಪ್ರಧಾನವಾಗಿ ವಿವರಿಸಲ್ಪಟ್ಟ ದೈವಗಳ ಕಥೆಯ ತವರೂರು ತುಳುನಾಡು. ಈ ಭಾಗದಲ್ಲಿ ಕಾಂತಾರ-೧ ಮಿಶ್ರ ಪ್ರತಿಕ್ರಿಯೆಯೆ ವ್ಯಕ್ತವಾಗಿದೆ. ಕಾಂತಾರ-೨ ಕ್ಕೆ ಹೋಲಿಸಿದರೆ ಈ ಚಿತ್ರ ಅಷ್ಟರ ಮಟ್ಟಿಗೆ ಮೂಡಿ ಬಂದಿಲ್ಲ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾತ್ರವಲ್ಲದೆ ಕೆಲವೊಂದು ಪಾತ್ರದ ಹಿನ್ನಲೆಯನ್ನು ಸರಿಯಾದ ರೀತಿಯಲ್ಲಿ ತೋರಿಸುವಲ್ಲಿ ಚಿತ್ರ ತಂಡ ಯಶಸ್ವಿಯಾಗಿಲ್ಲ ಎಂಬ ಬೇಸರವಿದೆ. ಕೆಲವು ಭಾಗದಲ್ಲಿ ಅತಿಯಾದ ತಾಂತ್ರಿಕತೆಯನ್ನು ಬಳಸಿರುವುದರಿಂದ ಮೊದಲ ಚಿತ್ರದಲ್ಲಿದ್ದ ನೈಜತೆಯ ಮಟ್ಟ ಕಡಿಮೆಯಾಗಿದೆ ಎಂದು ಹೇಳಿಕೆಗಳು ವ್ಯಕ್ತವಾಗುತ್ತಿದೆ. ಒಟ್ಟಾರೆಯಾಗಿ ಈ ಚಿತ್ರ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಿದ್ದು, ಸಾವಿರ ಕೋಟಿ ರೂಪಾಯಿಗಳ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ


Post a Comment

0 Comments