ನೇತ್ರಾವತಿ ನದಿ ನೀರು ಮಲಿನಗೊಳಿಸುವುದನ್ನು ತಡೆಗಟ್ಟುವಂತೆ ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ ಪರಿಸರ ಪ್ರೇಮಿ ತೋಂಸೆ ಜಯಕೃಷ್ಣ ಶೆಟ್ಟಿ

ಬೆಂಗಳೂರು: ನಮ್ಮ ವಾಸಕ್ಕೆ ಅತ್ಯಗತ್ಯವಾಗಿರುವ ಪರಿಸರವನ್ನು ಮನುಷ್ಯ ತನ್ನ ದುರಾಸೆಯಿಂದ ಮಾಲಿನ್ಯಗೊಳಿಸುತ್ತಿದ್ದಾನೆ. ಇದರಲ್ಲಿ ನೀರು ಮಲಿನವಾಗುತ್ತಿರುವುದು ಹೊರತಾಗಿಲ್ಲ. ದೇಶ ಹಾಗೂ ರಾಜ್ಯದ ಬಹುತೇಕ ಪ್ರಮುಖ ನದಿಗಳು ಇಂದು ಕಲುಷಿತಗೊಂಡಿರುವುದು ಅತ್ಯಂತ ನೋವಿನ ಸಂಗತಿ. ಹಿಂದೂಗಳ ಪವಿತ್ರ ನದಿಗಳಲ್ಲಿ ಒಂದಾಗಿರುವ ಗಂಗಾ ನದಿಯನ್ನು ಶುಚಿತ್ವಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹೊಸ ಹೆಜ್ಜೆಯನ್ನು ಇಟ್ಟು ತಮ್ಮ ಕೆಲಸವನ್ನು ಸಕಾರಗೊಳಿಸಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ದೇಶದ ಎಲ್ಲಾ ಪ್ರಮುಖ ನದಿಗಳನ್ನು ಶುದ್ದಗೊಳಿಸಲು ಅಥವಾ ಮಲಿನಗೊಳ್ಳುತ್ತಿರುವುದನ್ನು ತಡೆಗಟ್ಟಲು ಸರ್ಕಾರಗಳು ಹಾಗೂ ಜನಸಮೂಹ ಒಟ್ಟುಗೂಡಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸರ್ಕಾರೇತರ ಸಂಸ್ಥೆ ಮುಂದಾಗಿದ್ದು, ಸಂಸ್ಥೆಯ ಪ್ರಮುಖರು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಮತ್ತೊಂದು ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.

ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಬಹುಮುಖ್ಯ ಜೀವನದಿಗಳಲ್ಲಿ ಒಂದು. ನೇತ್ರಾವತಿ ನದಿಯ ನೀರು ಮಂಗಳೂರು ನಗರ ಹಾಗೂ ಜಿಲ್ಲೆಯ ಇತರ ತಾಲೂಕುಗಳಲ್ಲಿ ಕುಡಿಯುವ ನೀರಾಗಿ ಬಳಕೆಯಾಗಿತ್ತಿದೆ. ಅದರೆ ಪ್ರಸ್ತುತ ಅತೀಯಾದ ಕೈಗಾರೀಕರಣ ಹಾಗೂ ಇನ್ನಿತರ ಆಭಿವೃದ್ದಿ ಕಾರಣಗಳಿಂದಾಗಿ ನೇತ್ರಾವತಿ ನದಿ ನೀರು ಕಲುಷಿತಗೊಳ್ಳುತ್ತಿದೆ. ನಗರದ ಕೊಳಚೆ ನೀರು ನದಿಯನ್ನು ಸೇರಿ ಮತ್ತಷ್ಟು ಮಲಿನಕ್ಕೆ ಕಾರಣವಾಗಿದೆ. ನೇತ್ರಾವತಿ ನದಿ ನೀರನ್ನು ಕುಡಿಯಲು ಬಳಕೆಯಾಗುತ್ತಿರುವುದರಿಂದ ಈ ನದಿ ಮಲಿನಗೊಳ್ಳುತ್ತಿರುವುದನ್ನು ತಡೆಗಟ್ಟುವಂತೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಂಘಟನೆಯ ಸ್ಥಾಪಕರಾದ ತೋಂಸೆ ಜಯಕೃಷ್ಣ ಶೆಟ್ಟಿ ಕರ್ನಾಟಕ ರಾಜ್ಯದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದರು. ಈ ಬಗ್ಗೆ ಸುದೀರ್ಘವಾದ ಪತ್ರವೊಂದು ಸಚಿವರಿಗೆ ನೀಡಿದ್ದು ಕೂಡಲೇ ನೇತ್ರವಾತಿ ನದಿ ಮಲಿನಗೊಳ್ಳುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.


Post a Comment

0 Comments