ನವರಾತ್ರಿಯ ಮೂರನೇ ದಿನ ದೇವಿ ಚಂದ್ರ ಘಂಟಾ ದೇವಿಯ ಆರಾಧನೆ.!

ಚಂದ್ರಘಂಟಾ ದೇವಿ ನವರಾತ್ರಿ ಪೂಜೆಯ ಮೂರನೆಯ ದಿನ ಆರಾಧಿಸಲಾಗುವ ದುರ್ದಮ ಶಕ್ತಿಯ ರೂಪ. ಇವರು ಮಹಾದೇವಿಯ ತೃತೀಯ ರೂಪ ಎಂದು ಪೂಜಿಸಲ್ಪಡುತ್ತಾರೆ.

ತಲೆಯ ಮಧ್ಯದಲ್ಲಿ ಅರ್ಧಚಂದ್ರದ ಆಕಾರದ ಗಂಟೆ (ಘಂಟೆ) ಅಲಂಕೃತವಾಗಿರುವುದರಿಂದ ಇವರಿಗೆ ಚಂದ್ರಘಂಟಾ ಎಂಬ ಹೆಸರು ಬಂದಿದೆ. ಇವರು ಸಿಂಹದ ಮೇಲೆ ಸವಾರಿ ಮಾಡುತ್ತ, ಹತ್ತು ಕೈಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದಿರುವರು ಮುಖದಲ್ಲಿ ಶಾಂತಿ, ಕರುಣೆ, ಆದರೆ ಆಪತ್ತಿನ ಸಮಯದಲ್ಲಿ ದುಷ್ಟನಿಗ್ರಹದ ಭಯಂಕರ ತೇಜಸ್ಸು.

ಇವರು ಶಾಂತಿ, ಸಮೃದ್ಧಿ ಮತ್ತು ಧೈರ್ಯದ ಸಂಕೇತ.

ಭಕ್ತರ ಮೇಲೆ ಕರುಣೆಯ ದೃಷ್ಠಿ ಇಟ್ಟು, ಎಲ್ಲ ರೀತಿಯ ಬಾಧೆ, ಭಯ ಮತ್ತು ದುಷ್ಟಶಕ್ತಿಗಳನ್ನು ನಿವಾರಿಸುತ್ತಾರೆ. ,ಇವರ ಆರಾಧನೆಯಿಂದ ಆಂತರಿಕ ಶಕ್ತಿ, ಸಮತೋಲನ ಮತ್ತು ಆತ್ಮಶಾಂತಿ ದೊರೆಯುತ್ತದೆ.

ಜಪಮಂತ್ರ:

ॐ देवी चन्द्रघण्टायै नमः॥

(“ಓಂ ದೇವಿ ಚಂದ್ರಘಂಟಾಯೈ ನಮಃ”),

ನವರಾತ್ರಿ ಸಮಯದಲ್ಲಿ ಚಂದ್ರಘಂಟಾ, ದೇವಿಯ ಆರಾಧನೆ ಮಾಡಿದರೆ, ಜೀವನದಲ್ಲಿ ಧೈರ್ಯ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಿಕೆ.,,


Post a Comment

0 Comments