ಮೂಡುಬಿದಿರೆ: ಗ್ರಾಮ ಪಂಚಾಯತ್ ನ ಅರಿವು ಕೇಂದ್ರಗಳಿಗೆ "ದರ್ಶಿನಿ" ಕಾರ್ಯಕ್ರಮದಡಿ ಪೂರೈಸಲಾದ ಸಹಾಯಕ ಸಾಧನಗಳ ಬಳಕೆ ಕುರಿತು ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸಹಾಯಕ ಸಾಧನಗಳ ಬಳಕೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಪ್ರಾಯೋಗಿಕ ತರಬೇತಿಯು ದಿನಾಂಕ 23/09/2025ರ ಮಂಗಳವಾರ ಮೂಡುಬಿದಿರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಪಡಮಾರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕಿ ವನಿತಾ ರವರು ತರಬೇತಿ ನೀಡಿದರು. ಜಿಲ್ಲಾ ತರಬೇತಿ ಸಂಯೋಜಕರು ದೇವಕಿ ಮಾಂಟ್ರಾಡಿಯವರು ಉಪಸ್ಥಿತರಿದ್ದರು.
0 Comments