ಮಂಗಳೂರು: ಪರಿಶಿಷ್ಟ ಜಾತಿಯ ಪಂಬದ ಸಮುದಾಯದ ಶೈಕ್ಷಣಿಕ, ಔದ್ಯೋಗಿಕ ಬಲಿಷ್ಠತೆ ಹಾಗೂ ಆರೋಗ್ಯ ಪೂರ್ಣ ಬದುಕಿಗಾಗಿ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಂಬದರ ಸಮಾವೇಶ ಮಂಗಳೂರಿನ ಕುದ್ಮುಲ್ ರಂಗರಾವ್ ವೇದಿಕೆಯಲ್ಲಿ ಕಳೆದ ರವಿವಾರ ನಡೆಯಿತು. ಸಮಾವೇಶ ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಡಾ| ಪ್ರಭಾಕರ್ ಭಟ್, ವಜ್ರದೇಹಿ ಮಠದ ರಾಜಶೇಖರನಾಂದ ಸ್ವಾಮಿಜಿ ಮತ್ತಿತರರು ಭಾಗವಹಿಸಿದ್ದರು.
ಪಂಬದ ಸಮಾಜದ ಈ ಸಮಾವೇಶದಲ್ಲಿ ರುದ್ರಾಂಶ ಕನ್‌ಸ್ಟ್ರಕ್ಷನ್ ಮಾಲಕರಾದ ಆಜಯ್ ದೀಕ್ಷಿತ್ ಶೆಟ್ಟಿಯವರನ್ನು ಸಿರಿಮುಡಿ ಪೋಷಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಜಯ್ ದೀಕ್ಷಿತ್ ಶೆಟ್ಟಿಯವರು ಸಮಾಜದ ಹಿತಕ್ಕಾಗಿ ನೀಡಿದೆ ಸೇವೆ ಹಾಗೂ ತಾವು ವಹಿಸಿಕೊಂಡ ನಿರ್ಮಾಣ ಕಾರ್ಯದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ಯಕ್ಕೆ ಅವರನ್ನು ಪುರಸ್ಕಾರಿಸಲಾಗಿದೆ ಎಂದು ಕಾರ್ಯಕ್ರಮವನ್ನು ನಿರೂಪಿಸಿದ ದಯಾನಂದ್ ಕತ್ತಾಲಸಾರ್ ತಿಳಿಸಿದರು. ಪಂಬದ ಸಮಾಜದವರಿಗೆ ಮಾಡಲಿಚ್ಚಿಸಿರುವ ವಿಮಾ ಮೊತ್ತವನ್ನು ತಮ್ಮ ರುದ್ರಾಂಶ್ ಟ್ರಸ್ಟ್ ನ ಆಡಿಯಲ್ಲಿ ಬರಿಸುವುದಾಗಿ ತಿಳಿಸಿದ್ದಾರೆ ಎಂದು ಕತ್ತಾಲಸಾರ್ ತಿಳಿಸಿದರು.
0 Comments