ಯುವಶಕ್ತಿ ಬೆಳುವಾಯಿ ಬಳಗಕ್ಕೆ‌ 12ನೇ ವಾರ್ಷಿಕೋತ್ಸವದ ಸಂಭ್ರಮ.! ಅಪಘಾತ ವಿಮೆ ನೊಂದಣಿ, ವೈದ್ಯಕೀಯ ಸಲಹೆ ಉಚಿತ ಮಧುಮೇಹ ತಪಾಸಣೆ ಕಾರ್ಯಕ್ರಮ

ಯುವಶಕ್ತಿ ಬೆಳುವಾಯಿ ವಾಟ್ಸಾಪ್ ಬಳಗ  ಇದರ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ಆಧಾರ್ ನೊಂದಣಿ, ತಿದ್ದುಪಡಿ ಹಾಗೂ ಅಂಚೆ ಇಲಾಖೆ-ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ ₹ 549 /₹ 749 ) ನೊಂದಣಿ ಕಾರ್ಯಕ್ರಮವು ಸೆ.17 ರಂದು ಬೆಳುವಾಯಿ ಸೆಂಟ್ರಲ್ ಕಾಂಪ್ಲೆಕ್ಸ್ ಆವರಣದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.00 ರವರೆಗೆ ಜರಗಲಿದೆ.

ಇದೇ ಸಂದರ್ಭದಲ್ಲಿ ಬೆಳುವಾಯಿ ಶ್ರೀ ಗುರುಬಸವ ಕ್ಲಿನಿಕ್ ನ ವೈದ್ಯರಾದ ಡಾ.ಅಶ್ವೀನ್ ಕುಮಾರ್ ಜಿ.ಕೆ  ವೈದ್ಯಕೀಯ ಸಲಹೆ ನೀಡಲಿದ್ದು, ಬೆಳುವಾಯಿ ಲ್ಯಾಬ್ ಟೆಕ್ ಡಯಾಗ್ನೊನಿಕ್ ಲ್ಯಾಬೋರೇಟರಿ ಇವರಿಂದ ಉಚಿತ ಮಧುಮೇಹ ತಪಾಸಣೆ ನಡಯಲಿದೆ.

ಈ ಎಲ್ಲಾ ಸೇವೆಗಳಿಗೆ ಬೇಕಾದ ದಾಖಾಲೆಗಳನ್ನು‌ ಕಡ್ಡಾಯವಾಗಿ ತರಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ 80955 31595, 9663766014, 9900113134 ಮೂಲಕ ಸಂಪರ್ಕಿಸಬಹುದು ಎಂದು ಸಂಘಟಕರು‌ ತಿಳಿಸಿದ್ದಾರೆ.


Post a Comment

0 Comments