ನವರಾತ್ರಿಯ ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ.!

ಮಹಾಗೌರಿ ದೇವಿ ಶಾಂತಿಯ, ಪರಿಶುದ್ಧಿಯ ಹಾಗೂ ಕರುಣೆಯ ಪ್ರತೀಕ. ಅವಳು ಶ್ವೇತ ವಸ್ತ್ರ ಧರಿಸಿರುವುದರಿಂದ "ಶ್ವೇತಾಂಬರಧಾರಿ" ಎಂಬ ಹೆಸರು ಕೂಡ ಪ್ರಸಿದ್ಧ. ಮಹಾಗೌರಿಯ ಆರಾಧನೆ ಮಾಡಿದರೆ ಜೀವನದಲ್ಲಿ ಸುಖ-ಶಾಂತಿ, ದಾರಿದ್ರ್ಯ ನಾಶ, ಕಷ್ಟಗಳ ನಿವಾರಣೆ ಹಾಗೂ ಆಧ್ಯಾತ್ಮಿಕ ಪ್ರಗತಿ ಲಭಿಸುತ್ತದೆ ಎಂದು ನಂಬಿಕೆ.

ಆಚಾರ-ವಿಚಾರಗಳು:

ಭಕ್ತರು ಈ ದಿನದಲ್ಲಿ ಬಿಳಿ ಬಣ್ಣದ ಹೂವುಗಳನ್ನು ಸಮರ್ಪಿಸುತ್ತಾರೆ.

ಸಿಹಿ ತಿನಿಸುಗಳಲ್ಲಿ ಬೇಳೆ-ಬೆಲ್ಲ, ಹಾಲು-ಪಾಯಸವನ್ನು ದೇವಿಗೆ ನೆವೆದಿಸುತ್ತಾರೆ.

ಈ ದಿನ ಕುಮಾರಿಕಾ ಪೂಜೆ (ಕನ್ಯಾ ಪೂಜೆ) ನಡೆಸುವುದು ಶ್ರೇಷ್ಠವೆಂದು ಶಾಸ್ತ್ರ ಹೇಳುತ್ತದೆ.

ಅರ್ಥ:

ಮಹಾಗೌರಿ ದೇವಿಯ ಆರಾಧನೆಯಿಂದ ಮನಸ್ಸು ಶುದ್ಧವಾಗುವುದು, ಜೀವನದಲ್ಲಿ ಸೌಮ್ಯತೆ ಹಾಗೂ ಪವಿತ್ರತೆ ಹೆಚ್ಚುವುದು. ಅವಳು ಕರುಣಾಮಯಿ ತಾಯಿ ರೂಪದಲ್ಲಿ ಭಕ್ತರ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾಳೆ


Post a Comment

0 Comments