ಕನ್ನಡ ಚಿತ್ರರಂಗದಲ್ಲಿ ಸದ್ಯ Su From So ಚಿತ್ರದ್ದೆ ಮಾತು. ಒಂದು ಮೊಟ್ಟೆ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿಯವರ ಸಹ ನಿರ್ಮಾಣದಲ್ಲಿ ಮೂಡಿ ಬಂದಿರುವ Su From So ಚಿತ್ರ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನೋಡಲು ಜನ ಕಾತುರದಿಂದ ಕಾದು ಕುಳಿತಿದ್ದರು ಟಿಕೆಟ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಿಡಿ ಹಾಗೂ ಅಧ್ಬುತ ನಟನೆಯ ಮೂಲಕ ಈ ಚಿತ್ರ ಜನರ ಮನಸ್ಸು ಗೆದ್ದಿದೆ. ಮಾತ್ರವಲ್ಲದೆ ಸಣ್ಣ ಬಜೆಟ್ ನ ಚಿತ್ರವಾದರೂ ಚಾರ್ಲಿ, ಕಾಂತರದ ರೀತಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಕರಾವಳಿ ಬಹುತೇಕ ಕಲಾವಿದರನ್ನು ಹೊಂದಿರುವ ಈ ಚಿತ್ರ ಸದ್ಯ ಹೊಸದೊಂದು ದಾಖಲೆ ನಿರ್ಮಿಸಿದೆ. ಕೇವಲ ಒಂದು ಗಂಟೆಯಲ್ಲಿ Online ಮೂಲಕ ಬರೊಬ್ಬರಿ ೧೧ ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ಕಿಂಗ್ ಪಡೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿಯೇ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಪ್ರೇಕ್ಷಕರಿಲ್ಲದೆ ನೋಣ ಹೊಡೆಯುತ್ತಿದ್ದ ಚಿತ್ರಮಂದಿರಗಳಿಗೆ Su From So ಚಲನಚಿತ್ರ ಹೊಸ ಭರವಸೆಯನ್ನು ಮೂಡಿಸಿದೆ. ಅತ್ಯುತ್ತಮ ರೇಟಿಂಗ್ ಪಡೆಯುವ ಮೂಲಕ ನೈಜ ರೀತಿಯಲ್ಲಿ ಕಥೆಯಲ್ಲಿ ಚಿತ್ರಿಸಿರುವ ನಿರ್ದೇಶಕ ಜೆ.ಪಿ ತುಪಿನಾಡ್ ಅವರ ಮೊದಲ ಪ್ರಯತ್ನಕ್ಕೆ ಜನ ಪುಲ್ ಫಿದಾ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಸಹ ನಿರ್ಮಾಣದಲ್ಲಿ ರೆಡಿಯಾಗಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಸೇರಿದಂತೆ, ನಿರ್ದೇಶಕ ಜೆ.ಪಿ ತುಮಿನಾಡ್, ಸನಿಲ್ ಗುರು, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಮತ್ತಿತರ ಪ್ರಮುಖ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸುಲೋಚನ ಫ್ರಮ್ ಸೋಮೆಶ್ವರ ಚಿತ್ರ ಇನ್ನಷ್ಟು ದಿನ ಚಿತ್ರಮಂದಿರಗಳಲ್ಲಿ ಉಳಿಯುವ ಮೂಲಕ ಗಲ್ಲ ಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.



0 Comments