ಕೃಷ್ಣ ಕಟ್ಟೆಯಲ್ಲಿ ಕುಳಿತುಕೊಳ್ಳಬೇಕಿದ್ದ ದೇವರು ಪ್ರಸ್ತುತ ಮೇಜಿನ ಮೇಲೆ ಕುಳಿತುಕೊಳ್ಳುವಂತಾಗಿದ್ದು ಯಾಕೆ.? ಕೃಷ್ಣಕಟ್ಟೆಯಲ್ಲಿಯೇ ಮೊಳಗಲಿ ಕೃಷ್ಣನ ವೈಭೋಗ.!

ಮೂಡುಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಇತಿಹಾಸ ಪ್ರಸಿದ್ದ ಯಕ್ಷಗಾನಿಯ ಮೊಸರು ಕುಡಿಕೆಗೆ ಶತಮಾನಗಳಿಗೂ ಹೆಚ್ಚು ಕಾಲದ ಐತಿಹ್ಯವಿದೆ. ಮೊಸರು ಕುಡಿಕೆಯ ಅವಿಭಾಜ್ಯ ಅಂಗವಾದ ವೈಭವದ ಶೋಭಾಯಾತ್ರೆಯೂ ದೇವಸ್ಥಾನದಿಂದ ಹೊರಟು ಪೇಟೆಯ ಕೇಂದ್ರಭಾಗಕ್ಕೆ (ಹಿಂದಿನ ಹಳೇ ಬಸ್ ಸ್ಟ್ಯಾಂಡ್) ತಲುಪಿ, ಅಲ್ಲಿಂದ ಹಿಂತಿರುಗಿ ದೇವರ ಉತ್ಸವ ಮೂರ್ತಿ ಕೃಷ್ಣ ಕಟ್ಟೆಯಲ್ಲಿ ವಿರಾಜಮಾನರಾಗಿ  ಆರತಿ, ಹಣ್ಣುಕಾಯಿ ಸೇವೆಯನ್ನು ಪಡೆದುಕೊಂಡು, ತೀರ್ಥ ಪ್ರಸಾದದ ಮೂಲಕ ಅಸಂಖ್ಯಾತ ಭಕ್ತಾದಿಗಳನ್ನು ಅನುಗ್ರಹಿಸುತ್ತಿದ್ದುದು ನಡೆದುಬಂದ ವಾಡಿಕೆ. ಈ ಸಂಧರ್ಭದಲ್ಲಿ ಕೃಷ್ಣ ಕಟ್ಟೆಯ ಎದುರು ವಿಶಾಲವಾದ ಸ್ಥಳದಲ್ಲಿ ಸಹಸ್ರಾರು ಭಕ್ತಾದಿಗಳು ಯಶೋದಾ ಕೃಷ್ಣರ ಉತ್ಸವ ಮೂರ್ತಿಯ ದರ್ಶನ ಪಡೆದು ಪುಳಕಿತರಾಗುತ್ತಿದ್ದರು.

15 ವರ್ಷಗಳ ಕೆಳಗೆ ಯಶೋಧ-ಕೃಷ್ಣರ ಮೂರ್ತಿ ಕೃಷ್ಣ ಕಟ್ಟೆಯಲ್ಲಿಯೇ ವಿರಾಜಮಾನರಾಗಿ ಕುಳಿತು ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಇಚೆಗೆ ದೇವರ ಪೂಜೆಗಿಂತ ಮೇಲಾಗಿ ಕಟ್ಟೆಯ ಮುಂಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಆರಂಭಿಸಿದರು ಅಲ್ಲಿಂದ ಕೃಷ್ಣ ಕಟ್ಟೆಯಿಂದ ದೇವರ ಉತ್ಸವ ಮೂರ್ತಿಯನ್ನು ಬದಿಗೆ ಸರಿಸಿ ಸಣ್ಣದೊಂದು ಮೇಜಿನ ಮೇಲೆ ಕುಳ್ಳಿರಿಸಲು ಶುರು ಮಾಡಿದರು. ಪಲ್ಲಕ್ಕಿಯಲ್ಲಿ ಕಂಗೊಳಿಸುತ್ತಿದ್ದ ದೇವರ ಉತ್ಸವ ಮೂರ್ತಿಗೆ ಕೃಷ್ಣ ಕಟ್ಟೆಯಲ್ಲಿ ಕುಳಿತುಕೊಳ್ಳುವ ಅವಕಾಶವೇ ಇಲ್ಲದಂತಾಯಿತು. ಇತಿಹಾಸ ಪ್ರಸಿದ್ದವಾದ ಕೃಷ್ಣ ಕಟ್ಟೆಯ ವೈಭೋಗ ಕಣ್ಮರೆಯಾಯಿತು.  ಕೃಷ್ಣ-ಯಶೋಧೆ ಕುಳಿತುಕೊಳ್ಳಲು ಸಮರ್ಪಿತವಾಗಿದ್ದ ಕೃಷ್ಣ ಕಟ್ಟೆಯ ಬದಲಾಗಿ ಸಣ್ಣದೊಂದು ಮೇಜಿನಲ್ಲಿಯೇ ಕುಳ್ಳಿರಿಸುವ ಪದ್ದತಿಯನ್ನು ಮುಂದುವರಿಸಿದರು. ದೇವರ ದರುಶನಕ್ಕೆ ಸಾಲುಗಟ್ಟಿ ಬರುತ್ತಿದ್ದ ಅಸಂಖ್ಯಾತ ಆಸ್ತಿಕ ಬಂಧುಗಳು "ಪ್ರಸಾದ" ವಂಚಿತರಾದರು. ಈಗ ಕೃಷ್ಣ ಕಟ್ಟೆಯೆಂದರೆ ಕೇವಲ ಅರಳಿಮರಕ್ಕೆ ಮಾತ್ರ ಸೀಮಿತವಾಗಿದ್ದು ಗತಕಾಲದ ಉನ್ನತಿಗೆ ಅವನತಿಯ ಮುನ್ನುಡಿ ಬರೆದಂತಿದೆ.

Krishna
ತಾತ್ಕಲಿಕವಾಗಿ ಇಡುವ ಕೃಷ್ಣನ ಪಿಒಪಿ ಮೂರ್ತಿ
ಕಿರಿಯ ವೇಷಗಳು, ಸಿಂಹ, ಕರಡಿ, ಹುಲಿವೇಷಗಳು ತಂಡೋಪತಂಡವಾಗಿ ಕುಣಿದು, ಪ್ರಸಾದ ಪಡೆದು ಪುನೀತರಾಗುತ್ತಿದ್ದ ಕೃಷ್ಣ ಕಟ್ಟೆಯ ಎದುರು ಬೃಹತ್ ವೇದಿಕೆಗಳು ನಿರ್ಮಾಣವಾಗುತ್ತದೆ. ಸ್ಥಳದ ಅಭಾವದಿಂದ ಶ್ರೀ ಕೃಷ್ಣನೇ ಸ್ಥಳವಾಕಾಶ ವಂಚಿತನಾಗಿದ್ದಾನೆ. ಕಟ್ಟೆಯಲ್ಲಿ ಕುಳಿತು ತನ್ನ ಭಕ್ತರಿಗೆ ದರುಶನ ನೀಡಬೇಕಿದ್ದ ಕೃಷ್ಣ ಪ್ರಸ್ತುತ ಮೇಜಿನ ಮೇಲೆ ಕುಳಿತು ದರ್ಶನ ನೀಡುವಂತಾಗಿದೆ. 
ಕಿರಿದು ಮಾಡಲಾಗಿರುವ ಕೃಷ್ಣ ಕಟ್ಟೆ

ಇತಿಹಾಸ ಪ್ರಸಿದ್ದ ಮೂಡುಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ವೈಭವದ ಮೊಸರು ಕುಡಿಕೆಯ ಭವ್ಯ ಶೋಭಾಯಾತ್ರೆಯಲ್ಲಿ ಕೇಂದ್ರ ಬಿಂದುವಾಗಿದ್ದ ಕೃಷ್ಣ ಕಟ್ಟೆಯಲ್ಲಿ ದೇವರಿಗೆ ನಡೆಯುವ ಸೇವೆ ಅದೇ ಕೃಷ್ಣ ಕಟ್ಟೆಯಲ್ಲಿ ನಡೆಯಬೇಕು ಎಂದು ಅಸಂಖ್ಯಾತ ಅಸ್ಥಿಕ ಬಂಧುಗಳ ಕೋರಿಕೆಯಾಗಿದ್ದು ಅದಷ್ಟು ಶೀಘ್ರದಲ್ಲಿ ಹಿಂದೆ ನಡೆಯುತ್ತಿದ್ದ ಪದ್ದತಿಯಂತೆ ಕೃಷ್ಣ ಕಟ್ಟೆಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂರ್ಜಾ ಕೈಂಕರ್ಯಗಳ ಕಾರ್ಯ ಮೊದಲಿನಂತೆ ಸರಿಯಾಗಿ ನಡೆಯಬೇಕು. ಆ ಮೂಲಕ ಮೂಡುಬಿದ್ರೆಯ ಜನರು ಇತಿಹಾಸವನ್ನು ಉಳಿಸುವವರು ಹೊರತಾಗಿ ಆಳಿಸುವವರಲ್ಲ ಎಂಬ ಸಂದೇಶ ಸಾರಬೇಕು ಎಂಬುದು ಕೃಷ್ಣ ಭಕ್ತರ ಬೇಡಿಕೆ.

Post a Comment

0 Comments