ಮೂಡುಬಿದ್ರೆ: ಜವನೇರ್ ಬೆದ್ರ ಫೌಂಡೇಶನ್(ರಿ) ನ ಅಬ್ಬಕ್ಕ ಬ್ರಿಗೇಡ್, ಬಕುತಿ ಭಜನಾ ವೃಂದ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಕೃಷ್ಣೋತ್ಸವದ ಅಂಗವಾಗಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಹಾಗೂ ಭಕ್ತಿಗೀತೆ ಸ್ಪರ್ಧಾ ಕಾರ್ಯಕ್ರಮ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ನೂರಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಉದ್ಯಮಿ ಶಿವಾನಂದ ಪ್ರಭು ಅವರು ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ಮುಕ್ತೇಸರರಾದ ಶ್ರೀ ಗುರುಪ್ರಸಾದ್ ಹೊಳ್ಳ, ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಅಮರ್ ಕೋಟೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿಯಾದ ಸಹನಾ ನಾಯಕ್, ಭಕುತಿ ಭಜನಾ ವೃಂದ ಸಂಚಾಲಕ ಪ್ರಥಮ್ ಎಸ್ ಬನ್ನಡ್ಕ, ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಸ್ಪರ್ಧೆಯ ಸಂಯೋಜಕಿ ಅಮಿತ ಬನ್ನಡ್ಕ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು, ಅಬ್ಬಕ್ಕ ಬ್ರಿಗೇಡ್ ಸಂಘಟನಾ ಕಾರ್ಯದರ್ಶಿ ಸಾರಿಕಾ ಹೆಗಡೆ ಉದ್ಘಾಟನೆ ಕಾರ್ಯಕ್ರಮ ನಿರೂಪಿಸಿದರು ಯುವ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಬಿ ಪೂಜಾರಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟೀ ರಂಜಿತ್ ಶೆಟ್ಟಿ, ಗಣೇಶ್ ಪೈ, ಸುಕನ್ಯ, ಸ್ಮಿತಾ ಹೊಳ್ಳ, ಸೌಮ್ಯ, ಸುನಿತಾ, ರಾಧಿಕಾ, ಸುಮಂತ್, ಮನು ಒಂಟಿ ಕಟ್ಟೆ, ವಿದ್ಯಾ, ರಾಧಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
0 Comments