ಧರ್ಮಸ್ಥಳ ಪ್ರಕರಣ: ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಪೋಲಿಸರಿಂದ ಲಘಲಾಠಿ ಪ್ರಹಾರ.?

ಧರ್ಮಸ್ಥಳ ಪ್ರಕರಣ ಸದ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸತ್ಯ ಯಾವುದು, ಸುಳ್ಳು ಯಾವುದು ಎಂಬ ಗೊಂದಲದಲ್ಲಿ ಜನಸಾಮಾನ್ಯರಿರುವ ಸಂಧರ್ಭದಲ್ಲಿ ಯೂಟ್ಯೂಬ್ ಚಾನೆಲ್ ಗಳು ದಿನಕ್ಕೊಂದು ಅಂತೆ-ಕಂತೆ ಸುದ್ದಿಗಳನ್ನು ಭಿತ್ತರಿಸಿ ಜನರನ್ನು ಮತ್ತಷ್ಟು ಗೊಂದಲಕ್ಕೆ ದೂಡಿದಂತಾಗಿದೆ. ಈ ನಡುವೆ ಯೂಟ್ಯೂಬರ್ಸ್ ಗಳಿಗೆ ಧರ್ಮಸ್ಥಳದ ಭಕ್ತರು ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.

ಯೂಟ್ಯೂಬರ್ಸ್ ಗಳು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆಿ ಇಲ್ಲ ಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡಿ ಕ್ಷೇತ್ರದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ನಮ್ಮ ತಾಳ್ಮೆಯ ಕಟ್ಟೆ ಹೊಡೆದಿದ್ದು ಇನ್ನೂ ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಳ ಭಕ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹದಿಮೂರು ವರ್ಷಗಳಿಂದ ಪೂಜ್ಯ ಖಾವಂದರು ಹಾಗೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಸತ್ಯವನ್ನು ಮರೆಮಾಚಿ ಸುಳ್ಳನ್ನು ಭಿತ್ತರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕನ್ನಡ ಪತ್ರಿಷ್ಠಿತ ಖಾಸಗಿ ಸುದ್ದಿ ಮಾಧ್ಯಮವೊಂದರ ವರದಿಗಾರನ ಮೇಲೂ ಹಲ್ಲೆ ಮಾಡಿದ್ದು, ಮಹೇಶ್ ಶೆಟ್ಟಿ ತಿಮರೋಡಿ ತಂಡದಿಂದ ಹಲ್ಲೆಯಾಗಿದೆ ಎಂದು ಸುದ್ದಿಗಳು ಪ್ರಸಾರವಾಗುತ್ತಿದೆ. ವರದಿಗಾರ ಸದ್ಯ ಬೆಳ್ತಂಗಡಿಯ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುವ ಬಗ್ಗೆ ವರದಿಯಾಗಿದೆ. ಈ ಎಲ್ಲಾ ಘಟನೆಗಳು ಸೌಜನ್ಯ ನಿವಾಸವಾದ ಪಾಂಗಾಳದ ಬಳಿ ನಡೆದಿದ್ದು ಎನ್ನಲಾಗಿದೆ. ಪರಿಸ್ಥಿತಿ ಕೈ ಮೀರಿದಾಗ ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದ್ದು. ಧರ್ಮಸ್ಥಳದ ಭಕ್ತರು ಸತ್ಯ ಯಾವುದೆಂದೂ ತಿಳಿಯಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.


Post a Comment

0 Comments