ಧರ್ಮಸ್ಥಳ ಕೇಸ್: SIT ಯಿಂದ ಹಿಂದೆ ಸರಿದ ಮತ್ತೊಬ್ಬ ಆಧಿಕಾರಿ.?

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವು ಹಾಗೂ ಅನಾಮಧೇಯ ವ್ಯಕ್ತಿಯೊರ್ವ ಆ ಪರಿಸರದಲ್ಲಿ ಹೂತಿಟ್ಟ ಶವಗಳನ್ನು ಹೊರತೆಗೆಯುವುದಾಗಿ ಹೇಳಿರುವ ಕೇಸ್ ಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್.ಐ.ಟಿ ರಚನೆ ಮಾಡಿತು. ಈ ಬೆನ್ನಲ್ಲೇ ಸಾಲು ಸಾಲು ವಿಘ್ನಗಳು ಎದುರಾಗುತ್ತಿರುವುದು ಮತ್ತೊಂದೊ ದೊಡ್ಡ ಸವಾಲಾಗಿದೆ.

ಎಸ್.ಐ.ಟಿ ತಂಡದಲ್ಲಿರುವ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತುಗಳು ಕಳೆದ ವಾರದಿಂದ ಕೇಳಿಬರುತ್ತಿದೆ. ಈ ನಡುವೆ ಎಸ್.ಐ.ಟಿಯಲ್ಲಿ ತಂಡದಲ್ಲಿದ್ದ ಅಧಿಕಾರಿ ಎಸ್.ಪಿ ಸೈಮನ್ ಅವರು ಎಸ್.ಐ.ಟಿ ತಂಡದಿಂದ ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ನಾನು ಅಧ್ಯಯನ ಮಾಡಿದ್ದು ಆ ಕಾರಣಕ್ಕಾಗಿ ತಂಡದಿಂದ ಹಿಂದೆ ಸರಿಯುತ್ತಿದ್ದೇನೆೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.


Post a Comment

0 Comments