ಮೂಡಬಿದ್ರೆಯ ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 'ಮಹಾಭಾರತ ಪ್ರವಚನ ಸಪ್ತಾಹ'

ಮೂಡಬಿದ್ರೆ: ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ವರ್ಷಂ ಪ್ರತಿ ನಡೆಯುವ 'ಮಹಾಭಾರತ ಪ್ರವಚನ ಸಪ್ತಾಹ' ಕಾರ್ಯಕ್ರಮ ದಿನಾಂಕ 20-07-2025 ರಿಂದ 26-07-2025 ವರೆಗೆ ಪ್ರತಿ ದಿನ ಸಂಜೆ 6.00 ರಿಂದ 7.30 ರ ತನಕ ನಡೆಯಲಿದೆ.

'ಮಹಾಭಾರತ ಪ್ರವಚನ ಸಪ್ತಾಹ'ದ ಪ್ರವಚಕರಾಗಿ ಪೂರ್ಣ ಪ್ರಜ್ಞಾ ವಿದ್ಯಾಪೀಠ ಕಾಲೇಜು, ಬೆಂಗಳೂರು ಇಲ್ಲಿನ ಪ್ರಾಂಶುಪಾಲರಾಗಿರುವ ಡಾ. ಸತ್ಯನಾರಯಣ ಆಚಾರ್ಯ ಭಾಗವಹಿಸಲಿದ್ದಾರೆ.

ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಭಾಗಿಯಾಗಿ ಹಾಗೂ ಮಹಾಭಾರತದ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ. ಮುಖ್ಯವಾಗಿ ಮಕ್ಕಳು ಹಾಗೂ ಇಂದಿನ ಯುವ ಸಮಾಜ ಮಹಾಭಾರತವನ್ನು ಹಾಗೂ ಅದರ ಸಾರವನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಅದ್ದರಿಂದ ತಪ್ಪದೇ ಭಾಗವಹಿಸಿ.


Post a Comment

0 Comments