ಕೆಂಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಮೂಡಬಿದಿರೆ: ಮೂಡಬಿದ್ರೆ ತಾಲೂಕಿನ ಹೊಸಬೆಟ್ಟು ಗ್ರಾಮದ ಕೆಂಪ್ಲಾಜೆ ಪರಿಸರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶತಮಾನಗಳ ಕಾಲದ ಇತಿಹಾಸವಿದೆ. ಈ ಹಿಂದೆ ದೇವಸ್ಥಾನವನ್ನು ಚಾಮುಂಡೇಶ್ವರಿ ದೇವಸ್ಥಾನ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದರು ಆ ಬಳಿಕ ಕಾರಣಾಂತರಗಳಿಂದ ದುರ್ಗಾಪರಮೇಶ್ವರಿ ದೇವಸ್ಥಾನ ಎಂದು ಮರುನಾಮಕರಣ ಮಾಡಲಾಯಿತು. ಈ ಕ್ಷೇತ್ರದ ಮೂಲವಾದ ದುರ್ಗೆಯೊಂದಿಗೆ(ಚಾಮುಂಡೇಶ್ವರಿ) ಮಹಾ ಗಣಪತಿ, ಸುಬ್ರಹ್ಮಣ್ಯ, ಅಣ್ಣಪ್ಪ ಪಂಜುರ್ಲಿ, ನಾಗಬ್ರಹ್ಮ, ರಕ್ತೇಶ್ವರಿ ಸಹಿತ ಸಹ ಪರಿವಾರ ದೈವಗಳು ಸಾನಿಧ್ಯವೂ ಕೂಡ ಇದೆ. ದೇವಸ್ಥಾನವನ್ನು ಆಭ್ಹಿವೃದ್ದಿ ಮಾಡುವ ನಿಟ್ಟಿನಲ್ಲಿ ಅಷ್ಟಮಂಗಳ ಪ್ರಶ್ಮಾ ಚಿಂತನೆಯನ್ನು ನಡೆಸಲಾಗಿದ್ದು ಈಗ ಊರ ಹಾಗೂ ಪರವೂರ ಜನರ ಸಹಾಯದೊಂದಿಗೆ ದೇವಸ್ಥಾನದ ಆಭಿವೃದ್ದಿ ಕಾರ್ಯಗಳನ್ನು ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 

ಆಷ್ಟ ಮಂಗಳ ಪ್ರಶ್ನೆಯಲ್ಲಿ ತಿಳಿಸಿದಂತೆ ಜೂನ್ ೨೫ರಂದು ಗಣಹೋಮ, ಆದಿತ್ಯಾದಿನವಗ್ರಹ ಹೋಮ, ಮೃತ್ಯುಂಜಯ ರುದ್ರ ಹೋಮ ದೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮುಂದಿನ ದಿನಗಳಲ್ಲಿ ಆಭಿವೃದ್ದಿ ಕಾರ್ಯಗಳನ್ನು ಆರಂಭಿಸಲಾಗುವುದು ಎಂದು ಆಡಳಿತ ವರ್ಗದ ಪ್ರಮುಖರು ತಿಳಿಸಿದ್ದಾರೆ. 

ಆಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಮೂಡಿ ಬಂದಿರುವ ಪ್ರಕಾರ ದೇವಸ್ಥಾನದ ಹೆಸರನ್ನು ಈ ಹಿಂದೆ ಇದ್ದ ಶ್ರೀ ಚಾಮುಂಡೇಶ್ವರಿ ಎಂದೇ ನಾಮಕರಣ ಮಾಡಬೇಕು ಎಂದು ತಿಳಿಸಿದ್ದಾರೆ. ಅಣ್ಣಪ್ಪ ಪಂಜುರ್ಲಿ ದೈವ ಪ್ರಸ್ತುತ ಹೊರಗೆ ಇದು, ಹಿಂದೆ ಇದ್ದಂತೆ ಒಳಗೆ  ಸ್ಥಳಾಂತರಿಸಲು ಸೂಚಿಸಿದ್ದಾರೆ ಹಿಂದೆ ಈ ಸ್ಥಳದಲ್ಲಿ ಭೈರವ ಆರಾಧನೆ ಇದು  ಭೈರವ ಸಾನಿಧ್ಯಕ್ಕೆ ಕಟ್ಟೆ ಸ್ಥಾಪಿಸಬೇಕೆಂದು ಪ್ರಶ್ನೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಹೆಸರನ್ನು ಶ್ರೀ ರಾಮ ಭಜನಾ ಮಂಡಳಿ ಎಂದು ಮರುನಾಮಕರಣ ಮಾಡುವಂತೆ ಸೂಚಿಸಲಾಗಿದೆ.


Post a Comment

0 Comments