ಚೋಕರ್ಸ್ ಪಟ್ಟ ಕಳಚಿ 27 ವರ್ಷಗಳ ಬಳಿಕ ICC ಟ್ರೋಫಿ ಗೆದ್ದು ಚಾಂಪಿಯನ್ನಾರದ ಸೌತ್ ಆಫ್ರಿಕಾ ತಂಡ

ಲಾರ್ಡ್ಸ್: 100 ಬಾರಿ ಸೋತರು ಪರವಾಗಿಲ್ಲ ನಿರಂತರ ಪ್ರಯತ್ನ ಹಾಗೂ ಶ್ರದ್ದೆಯಿದ್ದರೆ 101ನೇ ಬಾರಿಯಾದರೂ ಗೆಲುವು ನಿಶ್ಚಿತ ಎಂಬುದಕ್ಕೆ ಸೌತ್ ಆಫ್ರಿಕಾ ತಂಡ ಇಂದು ಗೆದ್ದು ಚಾಂಪಿಯನ್ ಪಟ್ಟ ಆಲಂಕರಿಸಿರುವುದೇ ಜೀವಂತ ಸಾಕ್ಷಿ. 27 ವರ್ಷಗಳಿಂದ ಐಸಿಸಿ ಟ್ರೋಪಿಯ ಬರವನ್ನು ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ "ಚಾಂಪಿಯನ್" ಪಟ್ಟವನ್ನು ಆಲಂಕರಿಸಿದೆ. 

ಇಂಗ್ಲೇಂಡ್ ನ ಲಾರ್ಡ್ಸ್ ಮೈದಾನದಲ್ಲಿ ಜೂನ್ 11 ರಂದು ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದು ಬೌಲಿಂಗ್ ದಾಳಿಗೆ ಇಳಿದ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ೨೧೨ ರನ್ ಗಳಿಗೆ ಆಲೌಟ್ ಮಾಡಿತು. ಗುರಿ ಬೆನ್ನಟ್ಟಲು ಬ್ಯಾಂಟಿಗ್ ಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾದ ಬೌಲರ್ ಗಳು ಶಾಕ್ ನೀಡಿದರು. ಆಸ್ಟ್ರೇಲಿಯಾದ ಬೌಲರ್ ಗಳ ದಾಳಿಗೆ ತತ್ತರಿಸಿದ ಆಫ್ರಿಕನ್ನಾರು ೧೩೮ ರನ್ ಗೆ ಆಲೌಟ್ ಆಗಿ ೭೪ ರನ್ ಗಳ ಹಿನ್ನಡೆ ಆನುಭವಿಸಿತು. 

ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಂಟಿಗ್ ಗೆ ಇಳಿದ ಆಸ್ಟ್ರೇಲಿಯಾಗೆ ಆಫ್ರಿಕಾದ ಬೌಲರ್ ಗಳು ಶಾಕ್ ನೀಡಿದರು. ದೊಡ್ಡ ಮೊತ್ತದ ರನ್ ಕಳೆ ಹಾಕುವ ಲೆಕ್ಕಾಚಾರ ಹಾಕಿದ್ದ ಆಸ್ಟ್ರೇಲಿಯಾ ಬ್ಯಾಟರ್ ಗಳಿಗೆ ಎದುರಾಳಿ ಬೌಲರ್ ಗಳು ಒಬ್ಬರ ಹಿಂದೆ ಒಬ್ಬರಿಗೆ ಪೆವಿಲಿಯನ್ ದಾರಿ ತೋರಿಸಿದರು. ಅಂತಿಮವಾಗಿ ಕಾಂಗರೂಗಳು ೨೦೭ ರನ್ ಗಳನ್ನು ಕಲೆ ಹಾಕುವ ಮೂಲಕ ಆಫ್ರಿಕನ್ನಾರಿಗೆ ಗೆಲ್ಲಲು ೨೮೧ ರನ್ ಗಳ ಅಂತಿಮ ಮೊತ್ತ ನೀಡಿದರು. 

೨೮೧ ರನ್ ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್ ಉರುಳಿದ ಬಳಿಕ ನಾಯಕ ಟೆಂಬ ಬವುಮ ಹಾಗೂ ಮಾಕ್ರಮ್ ಉತ್ತಮ ಆಡಿಪಾಯ ಹಾಕಿಕೊಟ್ಟರು. ಟಿಂಬ ಬವುಮ ವಿಕೆಟ್ ಉರುಳಿದ ಬಳಿಕವೂ ಜವಾಬ್ದಾರಿಯುತ ಆಟವಾಡಿದ ಮಾಕ್ರಮ್ ಶತಕದ ರನ್ ಗಳಿಸುವುದಲ್ಲದೆ ತಂಡವನ್ನು ಗೆಲುವಿನ ತಡ ಸೇರಿಸಿದರು ಮಾತ್ರವಲ್ಲದೆ ೨೭ ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿ, ಚಾಂಪಿಯನ್ನರಾಗಿ ಹೊರ ಹೊಮ್ಮಿದರು. ಸೌತ ಆಫ್ರಿಕಾದ ಈ ಗೆಲುವನ್ನು ಇಡೀ ಕ್ರಿಕೆಟ್ ಲೋಕವೇ ಸಂಭ್ರಮಿಸಿದೆ. ಸೋಲನ್ನು ಧೈರ್ಯದಿಂದ ಸ್ವೀಕರಿಸಿ ಸತತ ಪ್ರಯತ್ನ ಪಟ್ಟರೆ ಒಂದಲ್ಲ ಒಂದು ದಿನ ಗೆಲುವು ಖಂಡಿತ ಎಂಬುದನ್ನು ನಾವು ಆರಿಯಬೇಕು.


Post a Comment

0 Comments