ಜವನೆರ್ ಬೆದ್ರ ಫೌಂಡೇಶನ್ ಅರ್ಪಿಸುವ ಕೃಷ್ಣೋತ್ಸವ 2025 ಕಾರ್ಯಕ್ರಮದ ಪ್ರಥಮ ಪೋಸ್ಟರ್ ಬಿಡುಗಡೆ

ಮೂಡಬಿದ್ರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆಯುವ ಜವನೆರ್ ಬೆದ್ರ ಫೌಂಡೇಶನ್(ರಿ) ಅರ್ಪಿಸುವ ಕೃಷ್ಣೋತ್ಸವ-2025 ಕಾರ್ಯಕ್ರಮದ ಪ್ರಥಮ ಪೋಸ್ಟರ್ ಬಿಡುಗಡೆ ೧೫-ಜೂನ್-೨೦೨೫ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭನೆಯಿಂದ ಕಾರ್ಯಕ್ರಮವನ್ನು ನಡೆಸಲು ಸಂಘಟನೆಯ ಪ್ರಮುಖರು ತೀರ್ಮಾನಿಸಿದ್ದು. ಅದರ ಮೊದಲ ಕೆಲಸವಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಗುರುಪ್ರಸಾದ್ ಹೊಳ್ಳ, ಉದ್ಯಮಿ ಪ್ರವೀಣ್ ಶೆಟ್ಟಿ, ಜವನೆರ್ ಬೆದ್ರ ಫೌಂಡೇಶನ್(ರಿ) ಸಂಘಟನೆಯ ಅಧ್ಯಕ್ಷರಾದ ಅಮರ್ ಕೋಟೆ, ಸಂಘಟನೆಯ ಸಂಚಾಲಕರು ಹಾಗೂ ಸಂಘಟನಾ ಕಾರ್ಯದರ್ಶಿ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.


Post a Comment

0 Comments