ಮತ್ತೇ ತನ್ನ ನರಿ ಬುದ್ದಿ ತೋರಿಸಿದ ಪಾಕಿಸ್ತಾನ.! "ಕದನ ವಿರಾಮ" ಘೋಷಣೆಯಾದ ಬೆನ್ನಿಗೆ ಕದನ ವಿರಾಮವನ್ನು ಉಲ್ಲಂಘಣೆ ಮಾಡಿದ ಪಾಕ್

ಪಾಕಿಸ್ತಾನ ಹಾಗೂ ಭಾರತದ ಭಾಗಶಃ ಯುದ್ದಕ್ಕೆ ಕದನ ವಿರಾಮ ಮೂಲಕ ತೆರೆಬಿತ್ತು ಎನ್ನುವಷ್ಟರಲ್ಲಿ ಪಾಕ್ ತನ್ನ ನರಿ ಬುದ್ದಿಯನ್ನು ಮತ್ತೇ ತೋರಿಸಿದೆ. ಉದಂಪುರ್ ಹಾಗೂ ಕಾಶ್ಮೀರದ ಹಲವಾರು ಭಾಗಗಲ್ಲಿ ಕದನ ವಿರಾಮ ಉಲ್ಲಂಘಣೆಯಾಗಿದೆ. ಪಾಕಿಸ್ತಾನದ ಡ್ರೋನ್ ಗಳು ಭಾರತದ ಮೇಲೆ ದಾಳಿ ಮಾಡುತ್ತಿದೆ.

ಗುಜಾರತ್ ನ ಕಛ್ ಭಾಗಗಳಲ್ಲಿಯೂ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ ಎಂದು ವರದಿಯಾಗಿದೆ. ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘನೆಯಾದ ಬಗ್ಗೆ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸ್ವತಃ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. ಕದನ ವಿರಾಮದ ಜಾರಿ ಏನಾಯ್ತು ಎಂದು ಪ್ರಶ್ನಿಸಿ, ಕದನ ವಿರಾಮ ಪಾಲನೆಯಾಗಿಲ್ಲ ಎಂದು ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ.

Post a Comment

0 Comments