ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ದದ ಕಾರ್ಮೋಡದ ಬಗೆಗಿನ ಅಧಿಕೃತ ಮಾಹಿತಿಯನ್ನು ಭಾರತದ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿಯ ಮೂಲಕ ದೇಶವಾಸಿಗಳಿಗೆ ತಿಳಿಸಿದ್ದಾರೆ. ಈಗಷ್ಟೇ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಶಿ, ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಹಾಗೂ ವಿದೇಶಾಂಗ್ ಇಲಾಖೆಯ ಕಾರ್ಯದರ್ಶಿಗಳು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಭಾರತದ ಮೇಲೆ ಅಪ್ರಜೋದಿತ ದಾಳಿಯನ್ನು ಪಾಕಿಸ್ತಾನ ನಡೆಸುತ್ತಿದೆ. ಭಾರತದ ಸಾಮಾನ್ಯ ನಾಗರೀಕರು, ಮಂದಿರ ಹಾಗೂ ಅಸ್ಪತ್ರೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಕೀಳು ಮಟ್ಟದ ದಾಳಿಯನ್ನು ನಡೆಸುತ್ತಿದ್ದೆ ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾರತ ನೀಡಿದೆ ಎಂದು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ:
ಭಾರತದ ಸೇನಾ ನೆಲೆಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಪಾಕಿಸ್ತಾನ ತಮ್ಮ ಮಾಧ್ಯಮಗಳಲ್ಲಿ ಭಿತ್ತರಿಸುತ್ತಿದ್ದು ಇದು ಸತ್ಯಕ್ಕೆ ಸಂಪೂರ್ಣ ದೂರವಾಗಿದ್ದು ಎಂದು ಹೇಳುತ್ತಾ ಸುರಕ್ಷಿತವಾಗಿರುವ ಭಾರತದ ಸೇನಾ ನೆಲೆಯ ಲೈವ್ ಚಿತ್ರವನ್ನು ಭಾರತ ವಿಶ್ವಕ್ಕೆ ತೋರಿಸುವ ಮೂಲಕ ಪಾಕಿಸ್ತಾನದ ಸುಳ್ಳು ಸುದ್ದಿಯನ್ನು ಜಗತ್ತಿನ ಮುಂದೆ ಪಾಕಿಗಳನ್ನು ಬೆತ್ತಲುಗೊಳಿಸಿದೆ. ಪಾಕಿಸ್ತಾನ ನೂರಾರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಇದು ಯಾವು ಸತ್ಯವಲ್ಲ ಎಂದು ತಿಳಿಸಿದೆ. ಪಾಕಿಸ್ತಾನ ಕಾಶ್ಮೀರದಿಂದ ಕಛ್ ವರೆಗೆ ದಾಳಿ ನಡೆಸಿದ್ದು ನಿಜ ಅದರೆ ಈ ಎಲ್ಲಾ ದಾಳಿಯನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಭಾರತದ ಅಧಿಕಾರಿಗಳು ಮತ್ತೊಮ್ಮೆ ತಿಳಿಸಿದ್ದಾರೆ.
ಪಾಕಿಸ್ತಾನದ ವಿರುದ್ದ ಭಾರತ ಯಾವುದೇ ಅಪ್ರಜೋದಿತ ದಾಳಿಯನ್ನು ಮಾಡಿಲ್ಲ ಬದಲಾಗಿ ಪ್ರಚೋದನೆಗೆ ತಕ್ಕ ಪ್ರತ್ರಿಕ್ರಿಯೆ ಮಾತ್ರ ನೀಡಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಮಾಡಿದ ದಾಳಿಯಲ್ಲಿ ಒರ್ವ ಎಡಿಜಿಪಿ ಮಟ್ಟದ ಅಧಿಕಾರಿ ಮೃತರಾಗಿದ್ದು, ಹಲವಾರು ನಾಗರೀಕರಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಗಡಿ ಭಾಗದಲ್ಲಿ ಪಾಕಿಸ್ತಾನ ಹೆಚ್ಚಿನ ಸೇನೆಗಳನ್ನು ನಿಯೋಜನೆ ಮಾಡುತ್ತಿದ್ದು ಇದಕ್ಕೆ ಭಾರತಕ್ಕೆ ಸಂಪೂರ್ಣ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ವಾಯುಸೇನೆ ಸಂಪೂರ್ಣ ಕಾರ್ಯಪ್ರವೃತ್ತವಾಗಿದ್ದು ಪಾಕಿಸ್ತಾನದ ಎಲ್ಲಾ ಮಿಸೈಲ್ ಹಾಗೂ ಡ್ರೋನ್ ಗಳನ್ನು ಯಶಸ್ವಿಯಾಗಿ ಹೊಡೆದು ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಭಾರತ ಕ್ರಿಯೆಗೆ ತಕ್ಕ ಪ್ರತ್ರಿಕ್ರಿಯೆ ನೀಡುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಹೇಳಿ ಹೆಚ್ಚಿನ ಮಾಹಿತಿಗಳನ್ನು ಮುಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

0 Comments