ಮೂಡಬಿದ್ರೆ: ೪ ತಿಂಗಳ ಹಿಂದೆ ಮೂಡಬಿದ್ರೆಯ ೧೪ ವರ್ಷದ ಬಾಲಕ ಜೀವದ ಉಳಿವಿಗಾಗಿ ದಾನಿಗಳಿಗೆ ನೆರವಾಗುವಂತೆ ನಿಮ್ಮ "ಕದಂಬ ಮೀಡಿಯಾ" ಹಾಗೂ ಇನ್ನಿತರ ಮಾಧ್ಯಮಗಳು ಬಾಲಕ ಉಳಿವಿಗಾಗಿ ದಾನಿಗಳ ನೆರವನ್ನು ಕೋರಿತ್ತು ನಮ್ಮ ಮನವಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಮಗು ಇನ್ನೂ ಬದುಕಿ ಬರುತ್ತಾದೆ ಎಂದು ಭಾವಿಸಲಾಗಿತ್ತು ಅದರೆ ದೇವರ ಆಟವೇ ಬೇರೆಯಾಗಿತ್ತು ಸ್ವಲ್ಪ ದಿನಗಳ ಬಳಿಕ ಒಂದು ಮಟ್ಟಿನ ಚೇತರಿಕೆ ಕಂಡರು ಮತ್ತೇ ಆರೋಗ್ಯದಲ್ಲಿ ಏರುಪೇರಾಗಿ ಮತ್ತೇ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಬಾಲಕ ಇಂದು ರಾತ್ರಿ ೯.೩೦ ರ ಸಮಯಕ್ಕೆ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರುಳಿದಿದ್ದಾನೆ.
ಭವಿಷ್ಯದಲ್ಲಿ ಸಮಾಜದ ಧ್ರುವ ತಾರೆಯಾಗಿ ಮಿಂಚಬೇಕಿದ್ದ ಈ ಬಾಲಕ ಆನಾರೋಗ್ಯದ ಕಾರಣದಿಂದಾಗಿ ತನ್ನ ಜೀವದ ಹೋರಾಟವನ್ನು ಅಂತ್ಯಗೊಳಿಸಿರುವುದು ಅತ್ಯಂತ ದುಃಖದ ಸಂಗತಿ. ಬಾಲಕನ ಜೀವದ ಉಳಿವಿಗಾಗಿ ನೆರವಾದ ಎಲ್ಲಾ ದಾನಿಗಳಿಗೂ ನಮ್ಮ ಗೌರವಪೂರ್ವಕ ಧನ್ಯವಾದಗಳು.

.png)
0 Comments