ಆತ್ಮೀಯ ಓದುಗರೇ, ಒಂದು ಹೆಣ್ಣಿಗೆ ನ್ಯಾಯ ದೊರಕಿಸಿಕೊಡಲು ದಶಕಗಳ ಕಾಲದ ಹೋರಾಟ, ಧರ್ಮಕ್ಷೇತ್ರ ಧರ್ಮಸ್ಥಳದ ಮೇಲಿನ ಅಪಪ್ರಚಾರ. ಆರೋಪಿಗಳ ಪತ್ತೆಗಾಗಿ ತೀರ್ವ ಹೋರಾಟ, ಪ್ರತಿಭಟನೆಗಳು. ಸೋಷಿಯಾಲ್ ಮೀಡಿಯಾದಲ್ಲಿ ಸಾವಿರಾರು ಪೋಸ್ಟ್, ಒರ್ವ ಶಂಕಿತ ಆರೋಪಿ ಖುಲಾಸೆ ಈ ಎಲ್ಲಾದರ ನಡುವೆ ಜನಸಾಮಾನ್ಯರಿಗೆ ಬಗೆಹರಿಯದ ಗೊಂದಲ, ಯಾವುದು ಸತ್ಯ; ಯಾವುದು ಮಿಥ್ಯ.? ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಒಂದು ಸುದೀರ್ಘವಾದ ಅಂಕಣವನ್ನು ಇಲ್ಲಿ ಪ್ರಕಟಿಸಲಾಗಿದೆ. ಸ್ವಲ್ಪ ಬಿಡುವು ಮಾಡಿಕೊಂಡು ಯಾವುದೇ ಪೂರ್ವಪರ ಯೋಚನೆಯಿಲ್ಲದೆ ಓದಿ ಹಾಗೂ ನಿಮ್ಮ ಮನಸ್ಸಿನ ಅಂತರಾಳದ ಮಾತು ಏನಾಗಿದೆ ಎಂಬುದನ್ನು ಕೇಳಿ. ಆಗ ನಿಮ್ಮೆಲ್ಲ ಗೊಂದಲಗಳಿಗೆ ಉತ್ತರ ಸಿಗಲಿದೆ.
ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮ ಕಾರ್ಯಗಳು:
'ಧರ್ಮಸ್ಥಳ' ಈ ಹೆಸರು ಯಾರಿಗೆ ತಿಳಿದಿಲ್ಲ ಹೇಳಿ. ಭಾರತದ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಒಂದು. 'ಧರ್ಮ ದೇವರು' ಹಾಗೂ 'ಧರ್ಮ ದೈವಗಳು' ನೆಲೆ ನಿಂತ ಪುಣ್ಯ ಸ್ಥಳ ಎಂಬ ಒಂದೇ ಕಾರಣಕ್ಕೆ ನಮ್ಮ ಧರ್ಮಸ್ಥಳ ಇಷ್ಟು ಪ್ರಖ್ಯಾತಿ ಪಡೆದಿದೆಯೇ ಎಂದು ಕೇಳಿದರೆ ಖಂಡಿತ ಇಲ್ಲ, ದೈವ ಹಾಗೂ ದೇವರುಗಳು ನೆಲೆ ನಿಂತಿರುವ ಪ್ರತಿಯೊಂದು ಜಾಗವೂ ಪುಣ್ಯ ಸ್ಥಳವೇ ಅದರೆ ಅದರ ಜೊತೆಗೆ ಆಶಕ್ತರಿಗೆ ಶಕ್ತಿ ತುಂಬಲು ನಡೆಸುವಂತಹ ಲೋಕ ಕಲ್ಯಾಣ ಕಾರ್ಯಗಳನ್ನು ನಡೆಸಿದಾಗ ಮಾತ್ರ ಮತ್ತಷ್ಟು ಪ್ರಖ್ಯಾತಿಯನ್ನು ಹೊಂದಲು ಸಾಧ್ಯ. ಅಂತಹ ಖ್ಯಾತ ದೇವಸ್ಥಾನಗಳ ಪಟ್ಟಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಪುಣ್ಯ ಕ್ಷೇತ್ರಗಳಲ್ಲಿ ಈ 'ಧರ್ಮಸ್ಥಳ'(ಕುಡುಮ)ವೂ ಒಂದು.
'ಧರ್ಮ' ದೇವರು ಹಾಗೂ 'ಧರ್ಮ' ದೈವಗಳೂ ಒಟ್ಟಿಗೆ ನೆಲೆನಿಂತಿರುವ ಸ್ಥಳವಾಗಿರುವುದರಿಂದ ಈ ಕ್ಷೇತ್ರವನ್ನು 'ಧರ್ಮಸ್ಥಳ' ಎಂದು ಕರೆಯುತ್ತಾರೆ. ಇಲ್ಲಿ ಯಾವುದೇ ರೀತಿಯ ಅಧರ್ಮಕ್ಕೆ ದಾರಿಯಿಲ್ಲ ಪ್ರತಿಯೊಂದು ಧರ್ಮ ಕಾರ್ಯದಲ್ಲಿ ನಡೆಯಬೇಕು, ಧರ್ಮವನ್ನು ಬಿಟ್ಟು ಅಧರ್ಮದಲ್ಲಿ ನಡೆದರೆ ಅಂತವರನ್ನು ಇಲ್ಲಿ ನೆಲೆ ನಿಂತಿರುವ ಧರ್ಮ ದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಮಂಜುನಾಥ ಸ್ವಾಮಿ ನೋಡಿಕೊಳ್ಳುತ್ತಾರೆ ಎಂಬ ಬಲವಾದ ನಂಬಿಕೆ ಸನಾತನ ಹಿಂದೂಗಳದ್ದು.
ದಾನ-ಧರ್ಮದ ಕಾರಣಕ್ಕಾಗಿ ಮತ್ತಷ್ಟು ಪ್ರಖ್ಯಾತಿ:
'ಧರ್ಮ ದೇವರು' ಹಾಗೂ 'ಧರ್ಮ ದೈವ'ಗಳು ನೆಲೆನಿಂತಿರುವ ಸ್ಥಳವಾಗಿರುವುದರಿಂದ ಇಲ್ಲಿ ನಿತ್ಯ ನಿರಂತರವಾಗಿ ದಾನ ಧರ್ಮ ಕಾರ್ಯಗಳು ನಡೆಯಬೇಕು ಎಂಬುದು ಪ್ರತೀತಿ ಈ ಕಾರಣದಿಂದಾಗಿ ಧರ್ಮಸ್ಥಳದ ಈ ಪುಣ್ಯ ಕ್ಷೇತ್ರದಲ್ಲಿ ಪ್ರತಿ ನಿತ್ಯ ಲಕ್ಷಾಂತರ ಜನರಿಗೆ ಅನ್ನದಾಸೋಹವನ್ನು ನೀಡಲಾಗುತ್ತಿದೆ.
ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಪೂಜ್ಯ ಖಾವಂದರು:
ಧರ್ಮಸ್ಥಳದ ಆಡಳಿತವನ್ನು ನಡೆಸುವ ಜವಾಬ್ದಾರಿಯನ್ನು ಹೊರುವವರು ಧರ್ಮಾಧಿಕಾರಿಯಾಗಿ ಪೀಠದಲ್ಲಿ ಕುಳಿತು ಆಡಳಿತ ನಡೆಸಬೇಕು ಎಂಬುದು ಇಲ್ಲಿನ ವಾಡಿಕೆ. ಆ ಪ್ರಕಾರ ಧರ್ಮಸ್ಥಳದ ೨೦ನೇ ಧರ್ಮಾಧಿಕಾರಿಯಾಗಿದ್ದ ರತ್ನವರ್ಮಾ ಹೆಗ್ಗಡೆಯವವರು ಕಾಲಾವಾದ ನಂತರ ಅವರ ಹಿರಿಯ ಪುತ್ರ ವಿರೇಂದ್ರ ಹೆಗ್ಗಡೆಯವರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿಯಾಗಿ ಪೀಠವನ್ನು ಅಲಂಕರಿಸುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಆಡಳಿತದ ಚುಕ್ಕಾಣಿಯನ್ನು ಹಿಡಿದ ಬಳಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ನಡೆಸುತ್ತಾರೆ. ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಧರ್ಮ ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಕೈಗೊಂಡ ನಿರಂತರ ಕಾರ್ಯಗಳು ಧರ್ಮಸ್ಥಳದ ಇತಿಹಾಸದಲ್ಲಿ ಹೊಸ ಚರಿತ್ರೆಗೆ ನಾಂದಿಯಾಯಿತು.
i. ಸಾವಿರಾರು ಹಿಂದೂ ದೇವಾಲಯಗಳ ಜೀರ್ಣೋದ್ಧಾರ:
ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೂಜ್ಯ ಖಾವಂದರ ನೇತೃತ್ವದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಾವಿರಾರು ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಂಡರು ಮಾತ್ರವಲ್ಲದೆ ಧರ್ಮಸ್ಥಳದ ಹೆಸರಿನಲ್ಲಿ ಜೀರ್ಣೋದ್ದಾರವಾಗುತ್ತಿರುವ ಕ್ಷೇತ್ರಕ್ಕೆ ಧನ ಸಹಾಯವನ್ನು ನೀಡುವ ಮೂಲಕ ಆರಂಭಿಕ ಕೆಲಸ ಕಾರ್ಯಕ್ಕೆ ಮುನ್ನುಡಿ ಬರೆದರು. ಇಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಕಾಣಸಿಗುವ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಿಗೆ ಮುನ್ನುಡಿ ಬರೆದವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಖಾವಂದರು.
ii. ಸ್ವಸಹಾಯ ಸಂಘಗಳ ಮೂಲಕ ಜನರ ಜೀವನ ಮಟ್ಟ ಸುಧಾರಣೆ:
ಧರ್ಮಸ್ಥಳದ ಹೆಸರಿನಲ್ಲಿ "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ" ಎಂಬ ಸ್ವಸಹಾಯ ಸಂಘಗಳನ್ನು ಆರಂಭಿಸಿ ಜನರ ಜೀವನ ಮಟ್ಟವನ್ನು ಸುಧಾರಿಸುವ ಯೋಜನೆಗಳನ್ನು ಕೈಗೊಂಡರು. ಬ್ಯಾಂಕ್ ಗಳ ಸಹಾಯದಿಂದ ಯಾವುದೇ ದಾಖಲೆಗಳಿಲ್ಲದೆ ಸಾಲವನ್ನು ನೀಡುವ ಮೂಲಕ ಜನರು ತಮಗೆ ಬೇಕಾದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಂಘಗಳಿಂದ ಸಾಲವನ್ನು ಪಡೆದು, ನಿಗದಿತ ಸಮಯದೊಳಗೆ ಸಾಲಗಳನ್ನು ಮರುಪಾವತಿ ಮಾಡುವ ಮೂಲಕ ಜನರು ಅರ್ಥಿಕವಾಗಿ ಸ್ವಾವಲಂಬಿಗಳಾದರು.
ಸ್ವಸಹಾಯ ಸಂಘಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅದ್ಯತೆಯನ್ನು ನೀಡುವ ಮೂಲಕ ಮಹಿಳೆಯರನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡಿ ಮಹಿಳೆಯ ಜೀವನ ಮಟ್ಟವನ್ನು ಸುಧಾರಿಸುವ ನೂರಾರು ಕೆಲಸ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿನಲ್ಲಿ ಮಾಡಲಾಗಿದೆ. ಇಂದು ಅದೆಷ್ಟೋ ಕುಟುಂಬಗಳು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ ಎಂದಾದರೆ ಅದಕ್ಕೆ ಪೂಜ್ಯ ಖಾವಂದರ ದೂರ ದೃಷ್ಟಿ ಹಾಗೂ ಧರ್ಮ ದೈವ ಹಾಗೂ ದೇವರುಗಳು ಅವರಿಗೆ ನೀಡಿದ ಶಕ್ತಿ.
iii. ಮದ್ಯವರ್ಜನ ಶಿಬಿರಗಳ ಆಯೋಜನೆ:
ಸ್ವಸಹಾಯ ಸಂಘಗಳನ್ನು ಆರಂಭಿಸಿದ ಜೊತೆ ಜೊತೆಗೆ ಮದ್ಯವರ್ಜನ ಶಿಬಿರಗಳನ್ನು ಕ್ಷೇತ್ರದ ವತಿಯಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಯಿತು. ದುಶ್ಚಟಗಳ ದಾಸರಾಗಿ ಮನೆಗೆ ಹಾಗೂ ಊರಿಗೆ ಮಾರಿಯಾಗಿದ್ದ ಅದೆಷ್ಟೋ ಜನರ ಜೀವನವನ್ನು ಮದ್ಯವರ್ಜನ ಶಿಬಿರದ ಮೂಲಕ ಸುಧಾರಿಸಿ ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನವನ್ನು ನಡೆಸುವಂತೆ ಮಾಡಲು ಈ ಮದ್ಯವರ್ಜನ ಶಿಬಿರಗಳು ನೆರವಾಯಿತು.
iv. ಸಾಮೂಹಿಕ ವಿವಾಹ, ಶಿಕ್ಷಣ ಹಾಗೂ ಔಷಧೋಪಚಾರಗಳು:
ಶ್ರೀ ಕ್ಷೇತ್ರದ ಹೆಸರಿನಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಶಾಲೆ-ಕಾಲೇಜುಗಳು ಹಾಗೂ ಔಷಧೋಪಚಾರಗಳ ಸೇವೆಗಳನ್ನು ನೀಡುವ ಮೂಲಕ ಲೋಕ ಕಲ್ಯಾಣದ ಕಾರ್ಯಗಳನ್ನು ಕ್ಷೇತ್ರದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಈ ಎಲ್ಲಾ ಪುಣ್ಯ ಕಾರ್ಯಗಳಿಂದ ಪೂಜ್ಯ ಖಾವಂದರನ್ನು 'ಮಾತನಾಡುವ ಮಂಜುನಾಥ' ಎಂದು ಜನರು ಗೌರವಿಸ ತೊಡಗಿದರು.
ಧರ್ಮಸ್ಥಳ ಕ್ಷೇತ್ರದ ಹೆಸರಿನಲ್ಲಿ ನೂರಾರು ಪುಣ್ಯಕಾರ್ಯಗಳನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಇಷ್ಟೆಲ್ಲಾ ಖ್ಯಾತಿ ಪಡೆದಿರುವ ಈ ಪುಣ್ಯ ಕ್ಷೇತ್ರದ ಬಗೆಗೆ ಕೆಲವೊಂದು ಗೊಂದಲಗಳು ಜನಸಾಮಾನ್ಯರಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಮೂಡುತ್ತಿದೆ. ಇದು ವಾಸ್ತವಕ್ಕೆ ಎಷ್ಟರ ಮಟ್ಟಿಗೆ ಸತ್ಯ, ಹಾಗೂ ಎಷ್ಟರ ಮಟ್ಟಿಗೆ ಮಿಧ್ಯ ಎಂಬುದಕ್ಕೆ ಸುಲಭವಾಗಿ ಉತ್ತರಿಸಲು ಸಾಧ್ಯವಿಲ್ಲ. ಅದರೂ ಪ್ರಸ್ತುತ ದಿನಗಳಲ್ಲಿ ಎದ್ದಿರುವ ಪ್ರಶ್ನೆ ಹಾಗೂ ಗೊಂದಲಗಳ ಮೇಲೆ ಬೆಳಕನ್ನು ಚೆಲ್ಲಿ ಅಂತಿಮ ನಿರ್ಧಾರಕ್ಕಾಗಿ ನಿಮ್ಮ ಅಂತರಳಾವನ್ನು ಕೇಳಿಸುವ ಪ್ರಯತ್ನ ನಮ್ಮದು.
ದೇಶದ್ಯಾಂತ ಸುದ್ದಿಯಾಗುತ್ತಿರುವ 'ಸೌಜನ್ಯ' ರೇ* & ಕೊ*:
ದಾನ-ಧರ್ಮ ಹಾಗೂ ದೈವಿಕ ಕಾರ್ಯಗಳಿಂದ ವಿಶ್ವದ್ಯಾಂತ ಸುದ್ದಿಯಾಗುತ್ತಿದ್ದ ಧರ್ಮಸ್ಥಳ ಕಳೆದ ಕೆಲ ವರ್ಷಗಳಿಂದಿಚೆಗೆ ಅಲ್ಲಿ ನಡೆದ ಒಂದು ಹೆಣ್ಣಿನ ಬರ್ಬರ ಅತ್ಯಾ'ಚಾರ ಹಾಗೂ ಕೊ* ಕೇಸ್ ಗೆ ಸಂಬಂಧಿಸಿದಂತೆ ಭಾರೀ ಸುದ್ದಿಯಾಗುತ್ತಿದೆ. ಕಳೆದ ೧೨ ವರ್ಷಗಳ ಹಿಂದೆ ನಡೆದ ಆ ಒಂದು ಪ್ರಕರಣದಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಭಾರೀ ಸಂಚಲನ ಹಾಗೂ ಗೊಂದಲ ಸೃಷ್ಟಿಯಾಗಿದೆ.
ಧರ್ಮಸ್ಥಳದ ಪಾಂಗಾಳ ನಿವಾಸಿಗಳಾದ ದಿ.ಚಂದಪ್ಪ ಗೌಡ ಹಾಗೂ ಶ್ರೀಮತಿ ಕುಸುಮಾವತಿಯವರ ಪುತ್ರಿಯಾದ ಸೌಜನ್ಯ ಎಂಬಾಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಒಡೆತನದ ಎಸ್.ಡಿ.ಎಂ ವಿದ್ಯಾಸಂಸ್ಥೆಯಲ್ಲಿ ದ್ವೀತಿಯ ಪಿಯುಸಿಯಲ್ಲಿ ಓದುತ್ತಿದ್ದ ಸುಮಾರು ೧೭ ವರ್ಷ ಪ್ರಾಯದ ಬಾಲಕಿ ದಿನಾಂಕ ಆಕ್ಟೋಬರ್ ೦೯, ೨೦೧೨ ರಂದು ಎಂದಿನಂತೆ ಸ್ಪೇಷಲ್ ಕ್ಲಾಸ್ ಮುಗಿಸಿಕೊಂಡು ನೇತ್ರಾವತಿಯ ಸ್ನಾನಘಟ್ಟದ ಬಳಿ ಬಸ್ ನಿಂದ ಇಳಿದು ಮನೆಯ ಕಡೆ ಹೊರಟಿದ್ದು ಬಳಿಕ ನಾಪತ್ತೆಯಾಗಿರುತ್ತಾಳೆ. ರಾತ್ರಿ ಕವಿದರೂ ಮಗಳು ಮನೆಗೆ ಬಾರದನ್ನು ಕಂಡು ಪೋಷಕರು ಗಾಬರಿಯಾಗಿ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ ಪೋಲಿಸ್ ಠಾಣೆಗೆ ತೆರೆಳಿ ನಾಪತ್ತೆ ಪ್ರಕರಣವನ್ನು ದಾಖಲಿಸುತ್ತಾರೆ. ಬಳಿಕ ಊರವರ ಸಹಾಯದಿಂದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ರಾತ್ರಿ ಪೂರ್ತಿ ಹುಡುಕುತ್ತಾರೆ. ಭಾರೀ ಪ್ರಮಾಣದಲ್ಲಿ ಮಳೆ ಬರುತಿದ್ದುದರಿಂದ ರಾತ್ರಿ ಪೂರ್ತಿ ಹುಡುಕಲು ಸಾಧ್ಯವಾಗದೆ ನಾಳೆ ಹುಡುಕುವ ಮಗಳು ಅಪಾಯವಿಲ್ಲದೆ ಮನೆಗೆ ಬರಬಹುದು ಎಂದು ಧರ್ಮ ದೇವರುಗಳ ಮೇಲೆ ಭಾರ ಹಾಕಿ ಮನೆಗೆ ತೆರಳುತ್ತಾರೆ. ಮರುದಿನ ಬೆಳಗ್ಗೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಭೀಕರವಾಗಿ ದೈಹಿಕ ದೌರ್ಜನ್ಯಕ್ಕೊಳಗಾಗಿ ಕೊ'ಲೆಯಾದ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ಪೋಲಿಸ್ ಇಲಾಖೆ ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಾರೆ ಹಾಗೂ ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದಾಗ ಅವರು ಕೂಡಲೇ ಆಗಿನ ಗೃಹಸಚಿವರಾಗಿದ್ದ ಆರ್.ಆಶೋಕ್ ಅವರಿಗೆ ಕರೆ ಮಾಡಿ ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವೇ ಪತ್ತೆ ಹಂಚುವಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡುತ್ತಾರೆ ಇದಕ್ಕೆ ಸಕಾರತ್ಮಕವಾಗಿ ಪ್ರತಿಕ್ರಿಯಿಸಿದ ಅಂದಿನ ಗೃಹಸಚಿವರು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ತಿಳಿಸುತ್ತಾರೆ.
ಪೋಲಿಸರು ಈ ಪ್ರಕರಣ ಸಂಬಂಧ ಒರ್ವ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಾರೆ. ಅದರೆ ಒಂದು ವರ್ಷದ ಬಳಿಕ ಬಂಧಿಯಾಗಿರುವತ ನಿಜವಾದ ಆರೋಪಿ ಅಲ್ಲ ಬದಲಾಗಿ ಆರೋಪಿಗಳು ಹೊರಗಡೆ ಇದ್ದಾರೆ ಎಂಬ ಬಗೆಗೆ ಮಾತುಗಳು ಆರಂಭವಾಗುತ್ತದೆ ಈ ಸಂಬಂಧ ಹೋರಾಟಗಳು ಪ್ರಾರಂಭವಾಗುತ್ತದೆ. ಆರೋಪಿಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕು ಎಂಬ ಕೂಗು ಕೇಳಿ ಬರುತ್ತದೆ ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಪ್ರಕರಣವನ್ನು ವಹಿಸಲಾಯಿತು. ಇದರ ನಡುವೆ ಪ್ರಕರಣದಲ್ಲಿ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯ ಭಾಗಿಯಾಗಿದ್ದಾನೆ ಹಾಗೂ ಅವನ ಜೊತೆಗೆ ಮೂವರು ಧರ್ಮಸ್ಥಳದ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಸೌಜನ್ಯ ಪರ ಹೋರಾಟಗಾರರು ಬಲವಾದ ಆರೋಪವನ್ನು ಮಾಡಿದರು ಈ ಸಂಬಂಧ ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ೧೮-ಆಕ್ಟೋಬರ್-೨೦೧೩ ರಂದು ಸ್ವಷ್ಟಿಕರಣ ನೀಡಿದ್ದರು.
೯ ವರ್ಷಗಳ ಬಳಿಕ ಆರೋಪಿ ಖುಲಾಸೆ:
ಸೌಜನ್ಯ ಕೊ* ಹಾಗೂ ಅ'ತ್ಯಾಚಾರ ಪ್ರಕರಣವನ್ನು ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿ ತಪ್ಪಿತಸ್ಥ ಆರೋಪಿಗಳನ್ನು ಪತ್ತೆ ಹಂಚುವಂತೆ ನಿರ್ದೇಶನ ನೀಡಿತು. ಸಿ.ಬಿ.ಐ ಅಧಿಕಾರಿಗಳು ಈ ಸಂಬಂಧ ಸ್ಥಳಕ್ಕೆ ಆಗಮಿಸಿ ಪರೋಕ್ಷ ಸಾಕ್ಷಿಗಳನ್ನು ಮರು ವಿಚಾರಣೆ ನಡೆಸಿ ಅಂತಿಮ ಹಂತದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ನ್ಯಾಯಲಯ ಈ ಸಂಬಂಧ ವಿಚಾರಣೆಯನ್ನು ನಡೆಸಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲು ಪೂರಕವಾದ ಸಾಕ್ಷಿಗಳನ್ನು ಒದಗಿಸಲು ವಿಫಲವಾಗಿರುವುದರಿಂದ 'ಸಾಕ್ಷಿಗಳ ಕೊರತೆಯಿಂದ' ಆರೋಪಿಯನ್ನು ಈ ಪ್ರಕರಣದಿಂದ ಖುಲಾಷೆಗೊಳಿಸಲಾಗಿದೆ ಎಂದು ತೀರ್ಪು ನೀಡಿತು.
ಶ್ರೀ ಕ್ಷೇತ್ರದ ಮೇಲೆ ನೇರ ಆರೋಪ:
ಒರ್ವ ಆರೋಪಿಯನ್ನು ಕೋರ್ಟ್ ಖುಲಾಸೆಗೊಳಿಸಿದ ಬಳಿಕ ಸೌಜನ್ಯ ಪರ ಹೋರಾಟಗಾರರು ಈ ಸಂಬಂಧ ಮತ್ತಷ್ಟು ಹೋರಾಟವನ್ನು ಪ್ರಾರಂಭಿಸಿದರು. ಪರೋಕ್ಷವಾಗಿ ಆರೋಪಿಗಳನ್ನು ರಕ್ಷಿಸಿದ್ದು ಶ್ರೀ ಕ್ಷೇತ್ರದವರು ಎಂಬ ಆರೋಪವನ್ನು ಮಾಡಲಾರಂಭಿಸಿದರು. ರಾಜ್ಯದ ನಾನಾ ಕಡೆಗಳಲ್ಲಿ ಬಹಿರಂಗ ಸಮಾವೇಶಗಳನ್ನು ನಡೆಸಿದರು. ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಹಾಗೂ ಅವರ ಕುಟುಂಬದ ವಿರುದ್ದ ಆರೋಪಗಳ ಮೇಲೆ ಆರೋಪ ಮಾಡಲಾರಂಭಿಸಿದರು. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮಗಳ ಪಟ್ಟಿಯಲ್ಲಿ ಬರುವುದು ಸಾಮಾಜಿಕ ಜಾಲತಾಣ. ಭಾವನೆಗಳಿಗೆ ಬೆಲೆ ಕೊಡುವ ಜನರು ಸೌಜನ್ಯ ಹೋರಾಟದ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿಗೂಡಿಸಿದರು. ಮಾತ್ರವಲ್ಲದೆ ಹೋರಾಟಗಳು ತೀರ್ವ ತರವಾಗಿ ಪ್ರಚಾರವನ್ನು ಪಡೆಯಲಾರಂಭಿಸಿದವು.
ಭಾರೀ ಸದ್ದು ಮಾಡಿದ ಆ ಒಂದು ವಿಡಿಯೋ:
ಸೌಜನ್ಯ ಹೋರಾಟ ಸದ್ಯ ಮತ್ತಷ್ಟು ಸದ್ದು ಮಾಡಲು ಆ ಒಂದು ವಿಡಿಯೋ ಕಾರಣ. ಇತ್ತೀಚೆಗೆ ಬೆಂಗಳೂರಿನ ಯೂಟ್ಯೂಬರ್ ಒರ್ವ ಮಾಡಿದ ವಿಡಿಯೋ ಸುಮಾರು ೧.೫ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೌಜನ್ಯ ಪರವಾದ ಹೋರಾಟಕ್ಕೆ ಮತ್ತಷ್ಟು ಜನರು ಧ್ವನಿಗೂಡಿಸಿದಂತಾಗಿದೆ. ಮಾತ್ರವಲ್ಲದೆ ಸದ್ಯ ಇದೇ ಒಂದು ದೊಡ್ಡ ಚರ್ಚೆಯ ವಿಷಯವಾಗುತ್ತಿದೆ.
ಧರ್ಮ ಒಡೆಯುವ ಪ್ರಯತ್ನ ಎಂಬ ಆರೋಪ:
ಸನಾತನಿಗಳು ದೈವ-ದೇವರುಗಳು, ಆಚಾರ-ವಿಚಾರ ಹಾಗೂ ಗತಕಾಲದಲ್ಲಿ ನಂಬಿಕೆ ಉಳ್ಳವರು ಅವರ ನಂಬಿಕೆಯ ಮೂಲಕ್ಕೆ ಪೆಟ್ಟು ಕೊಟ್ಟರೆ ಸನಾತನ ಧರ್ಮದ ಶಕ್ತಿಯನ್ನು ಕುಗ್ಗಿಸಿ ತಮ್ಮ ಕಾರ್ಯವನ್ನು ಸುಲಭಗೊಳಿಸಿಕೊಳ್ಳಲು ನಮ್ಮ ಧರ್ಮ ಕ್ಷೇತ್ರಗಳ ಮೇಲೆ ಅಪಪ್ರಚಾರವನ್ನು ಅನ್ಯಧರ್ಮಿಯರು ಮಾಡುತ್ತಿದ್ದಾರೆ ಈ ಮೂಲಕ ನಮ್ಮ ಧರ್ಮ ಹಾಗೂ ನಂಬಿಕೆಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಗೊಂದಲಗಳ ಗೂಡಾಗಿರುವ ಬಾಲಕಿ 'ಸೌಜನ್ಯ' ಕೊ* ಪ್ರಕರಣ; ಯಾವುದು ಸತ್ಯ, ಯಾವುದು ಮಿಥ್ಯ:
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಗೊಂದಲದ ಗೂಡಾಗಿಯೇ ಉಳಿದಿದೆ. ಒಂದು ದಿಕ್ಕಿನಲ್ಲಿ ಯೋಚಿಸಿದರೆ ಸೌಜನ್ಯ ಹೋರಾಟಗಾರರ ಪ್ರಶ್ನೆ ಸರಿಯಾಗಿದೆ ಎಂದು ಭಾಸವಾಗುತ್ತದೆ. ಅದರೆ ಅದೇ ಇನ್ನೊಂದು ದಿಕ್ಕಿನಲ್ಲಿ ಯೋಚಿಸಿದರೆ ನಮ್ಮ ಧರ್ಮದ ಶಕ್ತಿಯನ್ನು ಕುಗ್ಗಿಸಲು ಇತರರು ನಮ್ಮ ಧರ್ಮ ಕ್ಷೇತ್ರದ ಮೇಲೆ ಹೂಡಿರುವ ಸಂಚು ಎಂದು ಭಾಸವಾಗುತ್ತದೆ ಒಟ್ಟಿನಲ್ಲಿ ಜನಸಾಮಾನ್ಯರು ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲದಲ್ಲಿದ್ದಾರೆ.
ಧರ್ಮ ಕ್ಷೇತ್ರದ ಮೇಲೆ ಆರೋಪ ಸಲ್ಲದು:
ಹಿಂದೂಗಳ ಪ್ರಮುಖ ಆಸ್ಮಿತೆ ಆಚರಣೆ ಹಾಗೂ ನಂಬಿಕೆ. ಧರ್ಮಸ್ಥಳ ಜೈನ ಧರ್ಮಿಯರ ಸುಪರ್ದಿಯಲ್ಲಿದ್ದರು ಹಿಂದೂಗಳ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಜೈನ ಧರ್ಮಿಯರನ್ನು ಅನ್ಯ ಧರ್ಮಿಯರು ಎಂದು ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ಸನಾತನ ಧರ್ಮದಲ್ಲಿ ಜೈನ ಧರ್ಮಿಯರು ನಂಬಿಕೆ ಉಳ್ಳವರು ಹಾಗೂ ಇಂದಿಗೂ ಆನೇಕ ದೈವಸ್ಥಾನಗಳ ಗುತ್ತು ಮನೆತನಗಳ ಪ್ರಮುಖ ಜೈನ ಧರ್ಮಿಯಾರಾಗಿದ್ದಾರೆ ಹಾಗೂ ಅಲ್ಲಿನ ದೈವಿಕ ಕಾರ್ಯಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೆ ಯಾವುದೇ ಚ್ಯುತಿ ಬಾರದಂತೆ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ನಮ್ಮ ಧರ್ಮ ನಮಗೆ ಶ್ರೇಷ್ಠ; ನಮ್ಮ ಧರ್ಮ ಕ್ಷೇತ್ರಗಳ ಮೇಲಿನ ಸುಳ್ಳು ಆರೋಪಗಳನ್ನು ನಡೆಸುವುದು ಸರಿಯಲ್ಲ ಬದಲಾಗಿ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಆರೋಪ ಮಾಡುವ ಬರದಲ್ಲಿ ಧರ್ಮ ಹಾಗೂ ಧರ್ಮ ಕ್ಷೇತ್ರವನ್ನು ದೂಷಿಸುವುದು ಸರಿಯಾದ ಮಾರ್ಗವಲ್ಲ. ಮಾನವರು ತಪ್ಪು ಮಾಡಬಹುದು ಅದರೆ ನಾವು ನಂಬುವ ದೈವ-ದೇವರುಗಳು ತಪ್ಪಿತಸ್ಥರನ್ನು ಕ್ಷಮಿಸಲಾರವು.
ನಿಜವಾದ ಆರೋಪಿಗೆ ಶಿಕ್ಷೆಯಾಗುವ ತನಕ ಹೋರಾಟ ಮುಂದುವರಿಯಲಿ:
ಒಂದು ಕ್ಷೇತ್ರ ಅಥವಾ ಒರ್ವ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹೋರಾಟ ನಡೆಸುವುದು ಸರಿಯಲ್ಲ ಬದಲಾಗಿ ಮುಕ್ತ ಮನಸ್ಸಿನಿಂದ ಯೋಚಿಸಿ ಯಾರು ತಪ್ಪು ಮಾಡಿದ್ದರೋ ಅವರುಗಳಿಗೆ ಈ ಮಣ್ಣಿನ ಕಾನೂನು ಶಿಕ್ಷೆ ನೀಡುವಂತಾಗಲಿ ಅಲ್ಲಿಯ ತನಕ ಹೋರಾಟಗಳು ಮುಂದುವರಿಯಲಿ. ಒರ್ವ ಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿ ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಿ ನಿಜವಾದ ಆರೋಪಿಯನ್ನು ಪತ್ತೆ ಹಚ್ಚೋಣ ಹಾಗೂ ನ್ಯಾಯಕ್ಕಾಗಿ ಧ್ವನಿಗೂಡಿಸೋಣ.
ನಮ್ಮ ಧರ್ಮದ ನಂಬಿಕೆಗಳು ಅನ್ಯ ಧರ್ಮಿಯರಿಗೆ ಆಹಾರವಾಗದಿರಲಿ:
ಹಿಂದೂ ಧರ್ಮಕ್ಕೆ ತನ್ನದೇ ಅದ ಇತಿಹಾಸವಿದೆ. ಬೇರೆ ಧರ್ಮಗಳ ರೀತಿ ಹಿಂದೂಗಳು ಅನ್ಯ ಧರ್ಮಿಯರನ್ನು ತಮ್ಮ ಧರ್ಮಕ್ಕೆ ಮತಂತಾರ ಮಾಡಿದವರಲ್ಲ. ಎಲ್ಲಾ ಧರ್ಮಗಳಲ್ಲಿಯೂ ಕೆಲವೊಂದು ಲೋಪ ದೋಷಗಳಿರಬಹುದು ಅದರೆ ಆ ಲೋಪ-ದೋಷಗಳು ಇತರ ಧರ್ಮಿಯರಿಗೆ ಆಹಾರವಾಗಬಾರದು. ನಮ್ಮ ಧರ್ಮದಲ್ಲಿನ ಸಣ್ಣ ಪುಟ್ಟ ಲೋಪಗಳನ್ನು ನಮ್ಮೊಳಗೆ ಬಗೆಹರಿಸಿಕೊಳ್ಳೋಣ ಬದಲಾಗಿ ಅನ್ಯ ಧರ್ಮಿಯ ನೇತೃತ್ವದ ಅವಶ್ಯಕತೆ ನಮಗಿಲ್ಲ ಎಂಬುದು ಎಲ್ಲಾರಿಗೂ ತಿಳಿದಿರಲಿ.
"ಕಾಲಾಯ ತಸ್ಮೈ ನಮ:":
ಹಿಂದೂಗಳು ಕರ್ಮದಲ್ಲಿ ನಂಬಿಕೆ ಉಳ್ಳವರು. ಇದು ಕಲಿಯುಗ ಯಾರು ತಿಳಿದು ತಪ್ಪುಗಳನ್ನು ಪದೇ ಪದೇ ಮಾಡುತ್ತಿರುತ್ತಾನೋ ಅವನಿಗೆ ಇಲ್ಲಿಯೇ ಕರ್ಮ ಫಲ ದೊರೆಯುತ್ತದೆ. ಅದ್ದರಿಂದ ಸೌಜನ್ಯ ಪ್ರಕರಣ ಒಂದು ಅತೀ ವಿಶೇಷ ಪ್ರಕರಣಗಳಲ್ಲಿ ಒಂದು. ಈ ಪ್ರಕರಣ ಇಂದಿಗೂ ಸರಿಯಾಗಿ ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ ಅದ್ದರಿಂದ ಇಲ್ಲಿ ಯಾರು ನಿಜವಾದ ತಪ್ಪಿತಸ್ಥಾರೋ ಅವರಿಗೆ ನಮ್ಮ ದೈವ-ದೇವರುಗಳು ಹಾಗೂ ಕಾಲವೇ ತಕ್ಕ ಶಿಕ್ಷೆಯನ್ನು ನೀಡುತ್ತದೆ ಎಂಬುದನ್ನು ನಾವು ಮರೆಯದಿರೋಣ. ನ್ಯಾಯವನ್ನು ಕೇಳೋಣ ಅದರೆ ನ್ಯಾಯದ ಹೆಸರಿನಲ್ಲಿ ವೈಯಕ್ತಿಕ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬೇಡಿ. ಸನಾತನಿಗಳು ಕರ್ಮವನ್ನು ನಂಬುತ್ತಾರೆ. ನಮ್ಮ ಧರ್ಮ ಗ್ರಂಥಗಳು ಇದನ್ನೇ ಭೋದಿಸುತ್ತದೆ ಅದ್ದರಿಂದ ಅನ್ಯ ಧರ್ಮಿಯರ ಭೋಧನೆ ನಮಗೆ ಅವಶ್ಯಕತೆಯಿಲ್ಲ.
"ಧರ್ಮೋ ರಕ್ಷತಿ ರಕ್ಷಿತಃ"
0 Comments