'ಕದಂಬ' ಈ ಒಂದು ಹೆಸರು ಕೇಳಿದ ತಕ್ಷಣ ಹಲವರಿಗೆ ಬೇರೆ ಬೇರೆ ರೀತಿಯ ವಿಷಯಗಳ ಬಗ್ಗೆ ನೆನಪಾಗಬಹುದು. ಇತಿಹಾಸದ ಬಗ್ಗೆ ಅತೀವ ಆಸ್ತಕ್ತಿ ಉಳ್ಳವರು 'ಕದಂಬ' ನಮ್ಮ ಹೆಮ್ಮೆಯ ಕರ್ನಾಟಕದ ಮೊದಲ ರಾಜಮನೆತನ ಎಂಬ ಯೋಚನೆ ಬರಬಹುದು ಅದೇ ರೀತಿ ಅಧ್ಯಾತ್ಮದ ಬಗ್ಗೆ ಒಲವು ಉಳ್ಳವರು ಭಗವಾನ್ ಶ್ರೀ ಕೃಷ್ಣನಿಗೆ ಪ್ರಿಯವಾದ ವೃಕ್ಷ 'ಕದಂಬ' ಎಂದು ಯೋಚಿಸಬಹುದು, ದೇವಿ ಪಾರ್ವತಿಯನ್ನು ಕದಂಬ ವನ ವಾಸಿನಿ ಎಂದು ಸಂಭೋದಿಸುವ ಹಿನ್ನೆಲೆಯ ಬಗ್ಗೆ ಯೋಚನೆ ಬರಬಹುದು ಅದೇ ರೀತಿ ವಾಸ್ತು, ಆರೋಗ್ಯ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ 'ಕದಂಬ' ಎಂಬ ನಾಮದ ಬಗೆಗೆ ಯೋಚನೆ ಹಾಗೂ ಅಲೋಚನೆ ಬಂದಿರಬಹುದು ಈ ಎಲ್ಲಾ ಯೋಚನೆಗಳು 'ಕದಂಬ' ಎಂಬ ಪದ ಅಥವಾ ಹೆಸರು ಎಷ್ಟು ಪ್ರಖ್ಯಾತಿ ಎಂಬ ಅಂಶವನ್ನು ಸೂಚಿಸುತ್ತದೆ.
"ಐ ಜಗದಂಬ ಮದಂಬ ಕದಂಬ ವನ ಪ್ರಿಯ ವಾಸಿನಿ ಹಾಸರತೆ"
"ಕದಂಬ ವನ ವಾಸಿನಿ" ದೇವಿ:
ಭಾರತದ ಹಿಂದೂ ಪುರಾಣಗಳ ಪ್ರಕಾರ ದೇವಿ ಪಾರ್ವತಿಗೆ ಕದಂಬ ವೃಕ್ಷವನ್ನು ಹೊಂದಿರುವ ಕಾಡಿನಲ್ಲಿ ವಾಸಿಸಲು ಅತ್ಯಂತ ಪ್ರಿಯವಾದ ಜಾಗ ಎಂದು ಉಲ್ಲೇಖಿಸಲಾಗಿದೆ ಅದ್ದರಿಂದ ದೇವಿ ಪಾರ್ವತಿಯನ್ನು 'ಕದಂಬ' ವನ ವಾಸಿನಿ ಎಂದು ಶ್ಲೋಕಗಳಲ್ಲಿ ವಿಶೇಷ ವಾಕ್ಯದಿಂದ ಬಣ್ಣಿಸಲಾಗಿದೆ.
'ಕದಂಬ' ಮರ ಹಾಗೂ ಶ್ರೀ ಕೃಷ್ಣ:
ಧರ್ಮಗ್ರಂಥಗಳ ಪ್ರಕಾರ, ಕದಂಬ ಹೂವು ಶ್ರೀಕೃಷ್ಣನ ಅಚ್ಚುಮೆಚ್ಚಿನ ಮತ್ತು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ. ಶ್ರೀಕೃಷ್ಣನು ಒಮ್ಮೆ ಯಮುನಾ ದಡದಲ್ಲಿರುವ ಗೋಪಿಕೆಯರ ಬಟ್ಟೆಗಳನ್ನು ಕದ್ದನು. ಅವರಿಗೆ ಪಾಠವನ್ನು ಕಲಿಸಲು, ಆ ಸಮಯದಲ್ಲಿ ಶ್ರೀಕೃಷ್ಣನು ಕದಂಬ ಮರವನ್ನು ಹತ್ತಿ ಕೊಳಲು ನುಡಿಸಿದನು. ಇಂದಿಗೂ, ಜನರು ಯಮುನಾ ದಡದಲ್ಲಿರುವ ನಿಧಿವನದ ಬಳಿಯ ಕದಂಬ ಮರದ ದರ್ಶನ ಪಡೆಯಲು ಹೋಗುತ್ತಾರೆ. ಹಾಗಾಗಿ ಕದಂಬ ಗಿಡವನ್ನು ಮನೆಯಲ್ಲಿ ನೆಡುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವು ಶ್ರೀಕೃಷ್ಣನ ಕೃಪೆ ಮತ್ತು ಬೆಂಬಲದಿಂದ ಆಶೀರ್ವದಿಸಲ್ಪಡುತ್ತೀರಿ.
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ:
ಕನ್ನಡದಲ್ಲಿ ದೊರೆತಿರುವ ತುಂಬಾ ಹಳೆಯ ಕಲ್ಬರಹವಾದ ತಾಳಗುಂದ ಕಲ್ಬರಹ ವು (ಇದು ಹಲ್ಮಿಡಿ ಶಾಸನ ಕ್ಕಿಂತಲೂ ಹಳೆಯದು) ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕರ್ನಾಟಕವನ್ನು ಆಳಿದ ಮೊದಲ ಮನೆತನ 'ಕದಂಬ' ರಾಜಮನೆತನ. ವಯೂರ ಶರ್ಮಾ ನಾಗಿದ್ದವ ಬಳಿಕ ವಯೂರ ವರ್ಮನಾಗಿ 'ಕದಂಬ' ವಂಶದ ಪ್ರಮುಖ ದೊರೆಗಳಲ್ಲಿ ಒಬ್ಬನಾಗಿ ಇತಿಹಾಸದಲ್ಲಿ ಕಾಣಸಿಗುತ್ತಾನೆ. ವಯೂರ ವರ್ಮನ ಬಳಿಕ ಆಡಳಿತಕ್ಕೆ ಬಂದ ಕಾಕುತ್ಸವರ್ಮ ಈ ಮನೆತನದ ಮತ್ತೋರ್ವ ಶೇಷ್ಠ ದೊರೆ.
ಕದಂಬ ಮರ ಮತ್ತು ವಾಸ್ತು ಪರಿಹಾರಗಳು:
ವಾಸ್ತು ಪ್ರಕಾರ, ನೀವು ಮನೆಯಲ್ಲಿ ಕದಂಬ ಹೂವಿನ ಗಿಡವನ್ನು ನೆಟ್ಟರೆ, ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ. ಅಲ್ಲದೆ, ವ್ಯಕ್ತಿಯು ಲಕ್ಷ್ಮಿ ನಾರಾಯಣನ ಆಶೀರ್ವಾದವನ್ನು ಪಡೆಯುತ್ತಾನೆ. ಜೊತೆಗೆ, ವ್ಯಕ್ತಿಯ ಆರ್ಥಿಕ ಸ್ಥಿತಿಯೂ ತುಂಬಾ ಉತ್ತಮವಾಗಿರುತ್ತದೆ. ನೀವು ಈ ಗಿಡವನ್ನು ಸುರಕ್ಷಿತವಾಗಿಟ್ಟರೆ, ಇದು ಹಣವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮನೆಯಲ್ಲಿ ಹಣದ ಹರಿವಿಗೆ ಅಡ್ಡಿಯಾಗುವ ವಾಸ್ತು ಮತ್ತು ಗ್ರಹ ದೋಷಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಹೂವಿನ ಕಾರಣದಿಂದಾಗಿ ನೀವು ಆರ್ಥಿಕ ಬಿಕ್ಕಟ್ಟು, ಅತಿಯಾದ ಖರ್ಚು, ಸಾಲ, ಕಳೆದುಹೋದ ಹಣ ಇತ್ಯಾದಿಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಕದಂಬ ಮರವು ಆರೋಗ್ಯಕ್ಕೂ ಪ್ರಯೋಜನಕಾರಿ
ಕದಂಬ ಮರವನ್ನು ಚರ್ಮದ ಕಾಯಿಲೆಗಳಿಗೆ ಸಹ ಬಳಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ಈ ಮರದ ತೊಗಟೆಯನ್ನು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪೇಸ್ಟ್ ತಯಾರಿಸುವ ಮೂಲಕ ಬಳಸಲಾಗುತ್ತಿತ್ತು. ಈ ಮರದ ತೊಗಟೆಯು ವ್ಯಕ್ತಿಯನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸಿತ್ತದೆ. ಇದಲ್ಲದೆ, ಇದರ ಪೇಸ್ಟ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ನಮ್ಮ 'ಕದಂಬ' ಸುದ್ದಿ ಜಾಲತಾಣ:
'ಕದಂಬ' ಎಂಬ ಪದ ಪುರಾಣ, ಇತಿಹಾಸ, ಆರೋಗ್ಯ, ವಾಸ್ತು ಹಾಗೂ ಇನ್ನಿತರ ಎಲ್ಲಾ ಹಂತದ ಕ್ಷೇತ್ರಗಳಲ್ಲಿ ತನ್ನದೇ ಅದ ಛಾಪು ಮೂಡಿಸಿದೆ ಸದ್ಯ ಇದೇ ಹೆಸರಿನಲ್ಲಿ ಆರಂಭಿಕವಾಗಿ 'ಕದಂಬ' ಮೀಡಿಯ ಎಂಬ ಹೆಸರಿನ ಹೊಸ ಸುದ್ದಿ ಜಾಲತಾಣವನ್ನು ಆರಂಭಿಸಿದ್ದು ಒಂದು ಹೊಸ ಧ್ಯೇಯ ಹಾಗೂ ಗುರಿಯೊಂದಿಗೆ ಇದನ್ನು ಪ್ರಾರಂಭಿಸಿದ್ದು ಭವಿಷ್ಯದಲ್ಲಿ ನಮ್ಮ ಇತಿಹಾಸ, ಧಾರ್ಮಿಕತೆ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತಾದ ವಿಡಿಯೋ ಸುದ್ದಿಗಳನ್ನು ಪ್ರಸಾರ ಮಾಡುವ ಕಾರ್ಯಗಳು ಪಟ್ಟಿಯಲ್ಲಿದ್ದು 'ಕದಂಬ' ಎಂಬ ಹೆಸರಿನ ಶ್ರೇಷ್ಠತೆಯನ್ನು ಉಳಿಸಿಕೊಂಡು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರುತ್ತದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಆಶೀರ್ವಾದ ಹಾಗೂ ಬೆಂಬಲದ ಮೂಲಕ 'ಕದಂಬ' ಮೀಡಿಯಾ ಎಂಬ ಮಾಧ್ಯಮ ಹೊಸ ಸಾಧನೆಯ ಮಾಡುತ್ತದೆ ಎಂಬ ಆಚಲದ ವಿಶ್ವಾಸ ಹಾಗೂ ನಂಬಿಕೆ ನಮ್ಮದಾಗಿದೆ.

0 Comments