ಬಂಟ್ಬಾಳ: ೧೨ ದಿನಗಳ ಹಿಂದೆ ಸಂಜೆ ಸುಮಾರು ೭ ಗಂಟೆಗೆ ದೇವಸ್ಥಾನಕ್ಕೆಂದು ತೆರಳಿದ್ದ ಫರಂಗಿಪೇಟೆಯ ೧೭ ವರ್ಷ ಪ್ರಾಯದ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಸುದ್ದಿ ವರದಿಯಾಗಿತ್ತು. ಈ ಸಂಬಂಧ ಕಳೆದ ವಾರ ಫರಂಗಿಪೇಟೆಯಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆಕೊಟ್ಟು ಬಾಲಕನನ್ನು ಹುಡುಕಿ ಕೊಡುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಸ್ವತಃ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಸದನದಲ್ಲಿ ಮಾತನಾಡಿದ್ದು ಶೀಘ್ರವೇ ಬಾಲಕ ಸುಳಿವು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಮಾತ್ರವಲ್ಲದೆ ಪ್ರತಿಯೊಬ್ಬರು ಬಾಲಕ ಶೀಘ್ರ ಪತ್ತೆಗೆ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದರು ಸದ್ಯ ಬಾಲಕನ ಸುಳಿವು ಪತ್ತೆಯಾಗಿದ್ದು ಎಲ್ಲಾರ ಮೊಗದಲ್ಲೂ ಸಂತೋಷ ತಂದಿದೆ.
ಪೋಲಿಸರ ನಿರಂತರ ಕಾರ್ಯಚರಣೆ ಹಾಗೂ ಸರ್ವ ಧರ್ಮ ದೇವರುಗಳಿಗೆ ತುಳುನಾಡಿನ ಜನರು ಸಲ್ಲಿಸಿದ ಪ್ರಾರ್ಥನೆಯ ಸಲುವಾಗಿ ದಿಗಂತ್ ಪತ್ತೆಯಾಗಿದ್ದಾನೆ ಈ ಬಗ್ಗೆ ದಿಗಂತ್ ಪೋಷಕರು ಖುಷಿ ವ್ಯಕ್ತಪಡಿಸಿದ್ದು ತುಳುನಾಡಿನ ಎಲ್ಲಾ ಧರ್ಮ ದೇವರುಗಳ ಫಲದಿಂದ ನಮ್ಮ ಮಗ ಯಾವುದೇ ತೊಂದರೆಯಿಲ್ಲದೆ ಪತ್ತೆಯಾಗಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಉಡುಪಿಯಲ್ಲಿ ಪತ್ತೆಯಾದ ಬಗ್ಗೆ ಮಾಹಿತಿ ದೊರೆತಿದ್ದು ಪೋಲಿಸರು ಬಾಲಕನನ್ನು ಫರಂಗಿಪೇಟೆಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

0 Comments