ನಾನು ಅವರನ್ನು ಕ್ಷಮಿಸುತ್ತೇನೆ; ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡೋಣ | ಶಿಕ್ಷೆಯ ಬದಲಿಗೆ ಮಾರ್ಗದರ್ಶನ - ನರೇಂದ್ರ ಮೋದಿ


ದೆಹಲಿ: ನರೇಂದ್ರ ಮೋದಿ ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ವ್ಯಕ್ತಿ, ಎಷ್ಟೇ ಟೀಕಿಸಿದರು ಮತ್ತೇ ಮತ್ತೇ ಹೊಸ ಭರವಸೆಗಳ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಿರುವ ಪ್ರಧಾನಿ ಮೋದಿ ತಮ್ಮನ್ನು ನಿಂದಿಸಿದ ವಿದ್ಯಾರ್ಥಿಗಳ ಬೆಂಬಲ್ಲಕ್ಕೆ ನಿಲ್ಲುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. Gen Z ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿರುವ ಪ್ರಧಾನಿ ಈಗಾಗಲೇ ಸಾಮಾಜೀಕ ಜಾಲತಾಣಗಳಲ್ಲಿ ನಾಲ್ಕೈದು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರರಾಗುತ್ತಿದ್ದರೆ. ಕಳೆದ ರಾತ್ರಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಜಂತರ್ ಮಂತರ್'ನಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ವಿರುದ್ದ ಕೆಟ್ಟ ಪದಗಳನ್ನು ನಿಂದಿಸಿರುವ ಕುರಿತು ಮಾತನಾಡಿದ್ದಾರೆ, ಮಾತ್ರವಲ್ಲದೆ ದಿವಂಗತರಾಗಿರುವ ತಮ್ಮ ತಾಯಿಯ ಬಗೆಗೂ ಮಾತನಾಡಿದ್ದು ನನಗೆ ಅತೀವ ದು:ಖವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಹಾಗೂ ನನ್ನ ತಾಯಿಯ ವಿರುದ್ದ ಮಾತನಾಡಿರುವ ವಿದ್ಯಾರ್ಥಿಗಳ ವಿರುದ್ದ ಯಾವುದೇ ಕಾನೂನು ಕ್ರಮ ಬೇಡ, ತಪ್ಪು ಮಾಡುವುದು ಸಹಜ, ಯುವ ಸಮೂಹ ಈ ಸಮಯದಲ್ಲಿ ತಪ್ಪು ಮಾಡಿದರೆ ಅವರನ್ನು ಶಿಕ್ಷಿಸುವ ಬದಲು ಪ್ರೀತಿಯಿಂದ ತಪ್ಪನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡೋಣ ಎಂದು ತಿಳಿಸಿದ್ದಾರೆ. ನಾನು ಅವರನ್ನು ಕ್ಷಮಿಸುತ್ತೇನೆ, ನನ್ನ ಈ ನಿರ್ಧಾರಕ್ಕೆ ನಿಮ್ಮ ಬೆಂಬಲವಿರಲಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಮೋದಿ ತಮ್ಮ ಮಾತಿನಲ್ಲಿ ಉತ್ರ್ಪೇಕ್ಷೆಯೊಂದನ್ನು ಬಳಸಿದ್ದು ಅದೆಷ್ಟೋ ಭಾರೀ ಹಲ್ಲು ನಮ್ಮ ನಾಲಿಗೆಯನ್ನು ಕಚ್ಚುತ್ತದೆ ಅದರೆ ನಾವು ಹಲ್ಲನ್ನು ಮುರಿಯುವುದಿಲ್ಲ ಯಾಕೆಂದರೆ ಹಲ್ಲು ಮತ್ತು ನಾಲಿಗೆ ನಮ್ಮದೇ ಆಗಿರುತ್ತದೆ, ಪ್ರತಿಭಟನೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ನಮ್ಮವರೇ, ಅವರನ್ನು ಕಾನೂನಿನ ಆಡಿಯಲ್ಲಿ ಸೇರಿಸಿ ಅವರ ಭವಿಷ್ಯವನ್ನು ಹಾಳುಮಾಡುವುದು ಸರಿಯಲ್ಲ ಬದಲಾಗಿ ಅವರಿಗೆ ಮಾರ್ಗದರ್ಶನ ನೀಡಿ, ಸರಿ ದಾರಿಗೆ ತರುವ ಮೂಲಕ ದೇಶದ ಭವ್ಯಪ್ರಜೆಗಳನ್ನಾಗಿ ರೂಪಿಸುವ ಎಂದು ಮೋದಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿಯವರ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು ಒರ್ವ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿಯ ಹೃದಯ ವೈಶಲ್ಯತೆಗೆ ಎಲ್ಲಾರೂ ತಲೆಬಾಗಿದ್ದಾರೆ. ಇಂತಹ ವ್ಯಕ್ತಿಯನ್ನು ನಿಂದಿಸಲು ನಿಮಗೆ ಹೇಗೆ ಮನಸ್ಸು ಬರುತ್ತದೆ ಎಂದು ಆನೇಕ ಜನರು ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಿರುವ ನರೇಂದ್ರ ಮೋದಿಯವರ ಈ ಒಂದು ಕಾರ್ಯ ಕೋಟ್ಯಾಂತರ ಭಾರತೀಯರಿಗೆ ಖುಷಿ ಕೊಟ್ಟಿದೆ.